ಅಭಿವೃದ್ಧಿಗೆ ಆಸ್ತಿ ತೆರಿಗೆಯೇ ಆರ್ಥಿಕ ಮೂಲ

Published on

ಬಳ್ಳಾರಿ : ನಗರದ ಅಭಿವೃದ್ಧಿಯು ಶೇ.80 ರಿಂದ ಶೇ.90 ರಷ್ಟು ಸಾರ್ವಜನಿಕರು ಪಾವತಿಸುವ ಆಸ್ತಿ ತೆರಿಗೆಯ ಆರ್ಥಿಕ ಮೂಲ ಅವಲಂಬಿಸಿದೆ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ನಗರದ ಬಿಡಿಸಿಸಿ ಕಚೇರಿಯಲ್ಲಿ ‘ಆಸ್ತಿ ತೆರಿಗೆ ಸಂಗ್ರಹ ಮತ್ತು ಮೂಲಭೂತ ಸೌಕರ್ಯಗಳ, ಪ್ಲಾಸ್ಟಿಕ್ ಬಳಕೆ ಹಾಗೂ ಇತರೆ ಸಮಸ್ಯೆಗಳು ’ ವಿಷಯದ ಕುರಿತು ಶುಕ್ರವಾರ ನಡೆದ ಕೈಗಾರಿಕೋದ್ಯಮಿಗಳು - ವ್ಯಾಪಾರದಲ್ಲಿ ಸಭೆಯಲ್ಲಿ ಮಾತನಾಡಿದರು. ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿಗಳ ತೆರಿಗೆ ಪಾವತಿಗೆ ಅನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು, ತಪ್ಪದೇ ಪಾವತಿಸಬೇಕು. ಕೈಗಾರಿಕಾ ವಲಯದಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆಗಳಿವೆ. ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ಪೂರೈಕೆ ಸೇರಿ ಅನೇಕ ಸಮಸ್ಯೆಗಳು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಿವೆ. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬಹುದಾಗಿದ್ದು, ಕೈಗಾರಿಕಾ ವಲಯದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಕೈಗಾರಿಕಾ ಪ್ರದೇಶದಲ್ಲಿಯೇ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯದಲ್ಲಿಯೇ ಸಭೆ ನಡೆಸಲಾಗುತ್ತದೆ ಎಂದರು.

ಬಿಡಿಸಿಸಿ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ರಸ್ತೆಗಳು, ಬೀದಿ ದೀಪಗಳ ನಿರ್ವಹಣೆ ಸೇರಿ ಅನೇಕ ಮೂಲಭೂತ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿ ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net