ಆಸ್ತಿ ವಿವರ ಕೆಎಂಎಫ್ 24 ತಂತ್ರಾಂಶದಲ್ಲಿ ಸೇರ್ಪಡೆ

Published on

ಬಳ್ಳಾರಿ : ಪಾಲಿಕೆ ವ್ಯಾಪ್ತಿಯಡಿ ಬರುವ ವಿವಿಧ ಬಗೆಯ ಆಸ್ತಿಗಳ ವಿವರ ಮಾಹಿತಿಯನ್ನು ಕೆಎಂಎಫ್24 ತಂತ್ರಾಅಶದಲ್ಲಿ ಸೇರ್ಪಡೆಗೊಳಿಸುವುದು ಅವಶ್ಯಕವಾಗಿದೆ ಎಂದು ಮಹಾನಗರ ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಾಲಿಕೆಯಡಿ ಬರುವ ಸ್ವತ್ತುಗಳಾದ ಇಲಾಖೆ, ಸರ್ಕಾರಿ, ಅರೆಸರ್ಕಾರಿ, ಸಂಘ-ಸಂಸ್ಥೆ, ಕಚೇರಿ, ವಸತಿ ಗೃಹ, ಸಮುದಾಯ ಭವನ, ಆಸ್ಪತ್ರೆ, ಪೊಲೀಸ್ ಸ್ಟೇಷನ್, ಶಾಲೆ, ಕಾಲೇಜು, ಮೈದಾನ, ಆಟದ ಮೈದಾನ, ದೇವಸ್ಥಾನ, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರ, ರಂಗಮಂದಿರ, ಖಾಲಿ ನಿವೇಶನ, ವಾಣಿಜ್ಯ ಕಟ್ಟಡ, ವಾಣಿಜ್ಯ ನಿವೇಶನಗಳು, ಉಗ್ರಾಣ(ಸ್ಟೋರ್) ಇತ್ಯಾದಿ ಸ್ವತ್ತುಗಳ ಮಾಹಿತಿಯನ್ನು ಕೆ.ಎಂ.ಎಫ್-24 ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವುದರೊಂದಿಗೆ ಸ್ವತ್ತುಗಳ ಆಸ್ತಿ ತೆರಿಗೆ ಪಾವತಿ ಬಾಕಿ ಇದ್ದಲ್ಲಿ ಪಾವತಿಸಬೇಕು ಎಂದು ತಿಳಿಸಿದೆ. ಅಗತ್ಯ ದಾಖಲೆಗಳನ್ನು ಕೆಎಂಎಫ್ ತಂತ್ರಾಂಶದಲ್ಲಿ ನೋಂದಾಯಿಸಲು ಕಚೇರಿ-1ರ ವಲಯ ಆಯುಕ್ತ ಗುರುರಾಜ್ ಸೌದಿ ಅಧಿಕಾರಿಯನ್ನು ನೇಮಿಸಿದ್ದು ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಬಹುದು. ಮಾಹಿತಿಗೆ ಮೊ.9482950502 ಗೆ ಸಂಪರ್ಕಿಸಬಹುದು

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net