ಬಳ್ಳಾರಿ : ಇಲ್ಲಿನ ಹಳೆಯ ಡಿಸಿ ಕಚೇರಿಯ ಮುಂಭಾಗದಲ್ಲಿ ಖಾಸಗಿ ಶಾಲಾ ಬಸ್ ಹರಿದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಕಳೆದ ಎರಡು ದಿನಗಳ ಮುನ್ನವೇ ನಗರಕ್ಕೆ ಬಂದಿರುವುದಾಗಿ ಮಾಹಿತಿಯಿದೆ. ಕುಟುಂಬಸ್ಥರ ಪತ್ತೆಗಾಗಿ ಶೋಧ ನಡೆಸಲಾಗಿದೆ ಎಂದು ಠಾಣಾ ಸಿಪಿಐ ತಿಳಿಸಿದರು. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.