ಬಳ್ಳಾರಿ : ಧರ್ಮಗುರು ಪ್ರವೀಣ ಪಗಡಲರವರ ನಿಗೂಢ ಸಾವಿನ ಕುರಿತು ತನಿಖೆಗೆ ಆಗ್ರಹಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ಫಾಧರ್ ಕ್ರಿಸ್ಟೋಫರ್ ಡಿ ಮಾತನಾಡಿ, ಪ್ರವೀಣ್ ಪಗಡಾಲ್ ಅವರು ಫಾಸ್ಟರ್ ಆಗಿದ್ದು, ಹಲವರಿಗೆ ಸಹಾಯವನ್ನು ಮಾಡಿದ ವ್ಯಕ್ತಿಯಾಗಿದ್ದಾರೆ. ಅವರದ್ದು ಎರಡು ಸಾಫ್ಟ್ ವೇರ್ ಕಂಪನಿಗಳಿದ್ದು, ಹಲವರಿಗೆ ಉದ್ಯೋಗ ನೀಡಿದ್ದಾರೆ. ಹೀಗೆ ಹಲವರಿಗೆ ಸಹಾಯ ಮಾಡುವ ಮನೋಭಾವ ಹೊಂದಿದ ಪ್ರವೀಣ್ ಪಗಡಾಲ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.
ದೇಹವನ್ನು ಪರೀಕ್ಷೆ ಮಾಡಿದ ವೈದ್ಯರು ಸರಿಯಾದ ರೀತಿಯಲ್ಲಿ ವಿವರ ನೀಡುತ್ತೀಲ್ಲ. ಹಾಗಾಗಿ ಇದು ಅಪಘಾತವಲ್ಲ ಅವರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ಸಾವಿನ ಹಿನ್ನೆಲೆಯನ್ನು ಕಂಡು ಹಿಡಿದು ಪ್ರವೀಣ್‌ಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ನಮ್ಮ ಕ್ರಿಶ್ಚಿಯನ್ ಸಮುದಾದವರೆಲ್ಲರೂ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.