ಇಂದು ವಿದ್ಯುತ್ ವ್ಯತ್ಯಯ

Published on

ಸಿರುಗುಪ್ಪ : ನಗರದ ಜೆಸ್ಕಾಂ ವ್ಯಾಪ್ತಿಯಲ್ಲಿ ನ.೨೩ ರಂದು ಬೆಳಗ್ಗೆ ೦೯ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ಹಚ್ಚೋಳ್ಳಿ, ಕುಡುದರಹಾಳು, ರಾವಿಹಾಳು, ಬಿ.ಎಂ.ಸೂಗೂರು, ಬೀರಳ್ಳಿ, ದೇಶನೂರು, ಕೆಂಚನಗುಡ್ಡ, ಬಾಗೇವಾಡಿ, ಬಗ್ಗೂರು, ರಾರಾವಿ, ಕುರುವಳ್ಳಿ, ಕೆ.ಸೂಗೂರು, ಕೆ.ಬೆಳಗಳ್ ಮತ್ತು ಅರಳಿಗನೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗೂ ಸಿರುಗುಪ್ಪ ನಗರದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸ ಮಾಡಬಾರದು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net