ಬಳ್ಳಾರಿ : ನಗರದ ದಕ್ಷಿಣ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜುಗೊಳ್ಳುವ ಎಫ್-25 ಹಾಗು ಎಫ್-46 ಫೀಡರ್‌ಗಳಲ್ಲಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.17 ರಂದು ಬೆಳಗ್ಗೆ 09.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಇಲಾಖೆಯಿಂದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರದೇಶಗಳು : ಆರ್.ಕೆ ಮಿಲ್ ರಸ್ತೆ, ಬಾಪೂಜಿ ನಗರ, ರಾಣಿತೋಟ, ದೊಡ್ಡ ಮಾರ್ಕೆಟ್, ಸಾಯಿ ಕಾಲನಿ, ಆರ್.ಆರ್.ಲೇಔಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ ಸೇರಿದಂತೆ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.