ಬಳ್ಳಾರಿ ಅಂಚೆ ನೌಕರರ ನಿಸ್ವಾರ್ಥ ಸೇವೆ ಗುರುತಿಸಿ ಯುವಾ ಬ್ರಿಗೇಡ್‌ನಿಂದ ಸನ್ಮಾನ

14022021 Bellary yuva bregade
Published on

ಬಳ್ಳಾರಿ: ಅಂಚೆ ಇಲಾಖೆ ನಂಬಿಕೆ ಇಟ್ಟು ಜನರು ನೀಡುವ ವಸ್ತುಗಳನ್ನು ಸಂಬಂಧಿಸಿದವರಿಗೆ ಜೋಪಾನವಾಗಿ ತಲುಪಿಸುವು ಪೋಸ್ಟ್ ಮನ್‌ಗಳ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಯುವಾ ಬ್ರಿಗೇಡ್‌ನ ಸಂಚಾಲಕ ಗುರುಪ್ರಸಾದ್ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಭಾನುವಾರ ಯುವಾ ಬ್ರಿಗೇಡ್ ಹಮ್ಮಿಕೊಂಡಿದ್ದ ಕಿಂದರಿಜೋಗಿ ಕಾರ್ಯಕ್ರಮದಲ್ಲಿ ಅಂಚೆ ನೌಕರರನ್ನು ಸನ್ಮಾನಿಸಿ ಮಾತನಾಡಿದರು.

ಕಚೇರಿಯ ಮುಖ್ಯ ಅಧಿಕಾರಿ ನಾಗರಾಜ್ ಮಾತನಾಡಿ, ಕರೊನಾ ಸಮಯದಲ್ಲಿ ಅಂಚೆ ಇಲಾಖೆ ನೌಕರರು ಸಹ ಕರೊನಾ ವಾರಿಯರ್ಸ್‌ರಂತೆ ಕಾರ್ಯನಿರ್ವಹಿಸಿದರು. ಆದರೆ, ಅದನ್ನು ಎಲ್ಲರೂ ಮರೆತಿರುವಾಗ ಯುವಾ ಬ್ರಿಗೇಡ್ ಸಂಘಟನೆ ನಮ್ಮನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಧನ್ಯವಾದಗಳು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net