ಬಳ್ಳಾರಿ: ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನೌಕರರ ಸಹಕಾರಿ ಸಂಘದ ಸಮುದಾಯ ‘ವನದಲ್ಲಿ ಅಂಚೆ ಇಲಾಖೆಯಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸುವರ್ಣ ಮಹೋತ್ಸವದ ನೆನಪಿನಲ್ಲಿ ಅಖಿಲ ‘ಾರತ ಗ್ರಾಮೀಣ ಬ್ಯಾಂಕ್ ಗಳ ನೌಕರರ ಒಕ್ಕೂಟದ ಸಹಯೋಗದಲ್ಲಿ ಫೆ.೭ ರಂದು ಬೆಳಗ್ಗೆ ೧೦ ಗಂಟೆಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಅಂಚೆ ವಿ‘ಾಗದ ಅಂಚೆ ಈಕ್ಷಕ ಪಿ.ಚಿದಾನಂದ ತಿಳಿಸಿದ್ದಾರೆ.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಚೇರ್‌ಮನ್ ಡಿ.ಆರ್.ದಿಲ್ಲಿಬಾಬು, ಅಖಿಲ ‘ಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಎಸ್.ವೆಂಕಟೇಶ್ವರ ರೆಡ್ಡಿ, ಅ‘್ಯಕ್ಷ ಎಚ್.ನಾಗ‘ೂಷಣ ರಾವ್, ವಿ.ಕೆ.ಬನ್ನಿಗೊಳ್, ಸಿ.ರಾಜೀವನ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾರ್ವಜನಿಕರು, ಅಂಚೆ ಚೀಟಿ ಸಂಗ್ರಹಕರು ಮತ್ತು ಆಸಕ್ತರು ಹೆಚ್ಚಿನ ಸಂಖೆಯಲ್ಲಿ ‘ಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.