ಆರೋಪ ಸಾಬಿತದರೆ ರಾಜಕೀಯ ನಿವೃತ್ತಿ

Published on

ಬಳ್ಳಾರಿ : ಕಾಂಗ್ರೆಸ್ ಪ್ರಾಸಿಕ್ಯೂಷನ್‌ಗೆ ಶಿಫಾರಸ್ಸು ಹೊರಡಿಸಿದ್ದು, ತನಿಖೆಯಲ್ಲಿ ಆರೋಪ ಸಾಬೀತದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಸಂಡೂರಿನ ಬನ್ನಿಹಟ್ಟಿ, ತಾಳೂರು ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್‌ಗೆ ದ್ವೇಷದ ರಾಜಕಾರಣ ಒಳ್ಳೆಯದಲ್ಲ. ರಿಜನಲ್ ಪಾರ್ಟಿಗಳು ದ್ವೇಷದ ರಾಜಕಾರಣ ಮಾಡುತ್ತವೆ. ಆದರೆ, ರಾಷ್ಟ್ರೀಯ ಪಕ್ಷ ಮೊದಲ ಬಾರಿಗೆ ಮಾಡುತ್ತಿದೆ. ಈ ಆರೋಪಕ್ಕೆ ಕಾನೂನು ಮೂಲಕ ಹೋರಾಟ ನಡೆಸುವೆ. ಬಿಜೆಪಿ ಅಧಿಕಾರದಲ್ಲಿ ಆರೋಗ್ಯ ಸಚಿವರಾಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿರುವೆ. ಟಾಸ್ಕ್ ಫೋರ್ಸ್ ಸಮಿತಿಯ ಸಲಹಯಂತೆ ಚೀನಾದಿಂದ ಪಿಪಿಎ ಕಿಟ್ ತರಸಲಾಗಿದೆ ಇದರಲ್ಲಿ ಯಾವುದೆ ಹಣ ಹೊಡೆಯುವ ದುರದ್ದೇಶವಿಲ್ಲ. ಆದರೆ, ಒಂದೂವರೆ ವರ್ಷ ಸುಮ್ಮನಿದ್ದ ರಾಜ್ಯ ಸರ್ಕಾರ ರಾಜ್ಯದಲ್ಲಿನ ಮುಡಾ, ವಾಲ್ಮೀಕಿ ಹಗರಣ ಹಾಗೂ ಭ್ರಷ್ಟಚಾರ ಮುಚ್ಚಿ ಹಾಕಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನನ್ನ ವಿರುದ್ದ ಪ್ರಾಸಿಕ್ಯೂಷನ್ ಕೊಡಲು ಹೊರಟಿದ್ದಾರೆ. ಇಂತಹ ಕಾಂಗ್ರೆಸ್‌ನ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ ಎಂದರು.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net