ಪೇದೆ ಕೊಲೆ ಮಾಡಿದ್ದು ಆತನ 2ನೇ ಪತ್ನಿಯೇ!

BLY-24-3
Published on

ಬಳ್ಳಾರಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್‌ಸ್ಟೇಬಲ್ ಪಿ.ಜಾಫರ್ ಸಾಹೀಬ್ (37)ನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಅವರ ಎರಡನೇ ಪತ್ನಿ ಹನುಮಕ್ಕ, ಈ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಬಳ್ಳಾರಿ ಎಸ್ಪಿ ರಂಜಿತ್‌ಕುಮಾರ್ ಬಂಡಾರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಪಿ.ಜಾಫರ್ ಸಾಹೀಬ್ ರಾತ್ರಿ ಮಲಗಿದ ವೇಳೆಯಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಸತ್ಯ ಬಾಯಿ ಬಿಚ್ಚಿಟ್ಟಿದ್ದಾರೆ. ಹನುಮಕ್ಕನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

2008ರಲ್ಲಿ ಡಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ಆಗಿ ನೇಮಕವಾಗಿದ್ದ ಜಾಫರ್ ಎರಡು ಮದುವೆಯಾಗಿದ್ದರು. ಮೊದಲನೇ ಪತ್ನಿ ನವೀನ್‌ತಾಜ್ ಮುಸ್ಲಿಂ ಆಗಿದ್ದು, 2ನೇ ಪತ್ನಿ ಹನುಮಕ್ಕ ಹಿಂದುವಾಗಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದ ಜಾಫರ್, ಎರಡನೇ ಪತ್ನಿ ಹನುಮಕ್ಕನೊಂದಿಗೆ ಬಳ್ಳಾರಿ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ಡಿವೋರ್ಸ್ ಆದ ಮೇಲೂ ಮೊದಲ ಪತ್ನಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಪ್ರತಿದಿನ ಮೊದಲ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತಾನಾಡುವುದನ್ನು ಕೇಳಿಸಿಕೊಂಡಿದ್ದ ಎರಡನೇ ಪತ್ನಿ ಹನುಮಕ್ಕ ನಿತ್ಯ ಜಗಳ ಮಾಡುತ್ತಿದ್ದರು. ಮಾ.22ರಂದು ರಾತ್ರಿ ಮೊಬೈಲ್‌ನಲ್ಲಿ ಮಾತಾಡಿದ ನಂತರ ಜಾಫರ್ ಮಲಗಿದ ವೇಳೆ ಹನುಮಕ್ಕ ಕಬ್ಬಿಣದ ರಾಡ್‌ನಿಂದ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net