ಮಕ್ಕಳ ಸೌಲಭ್ಯಕ್ಕೆ ನೆರವಾಗಲಿ

Published on

ಬಳ್ಳಾರಿ ; ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ‘ಮಕ್ಕಳ ಸ್ನೇಹಿ ಅಂಗನವಾಡಿ ಕೇಂದ್ರ ’ ನಿರ್ಮಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.

ನಗರದ ಹತ್ತನೇ ವಾರ್ಡ್‌ನ ಮರಿಸ್ವಾಮಿ ಮಠದ ಬಳಿ ನೂತನವಾಗಿ ನಿರ್ಮಾಣಗೊಂಡ ಮಕ್ಕಳ ಸ್ನೇಹಿ ಅಂಗನವಾಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಶುದ್ಧ ಕುಡಿವ ನೀರು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಗಾಳಿ - ಬೆಳಕು ಸಿಗುವ ರೀತಿಯಲ್ಲಿ ಕಟ್ಟಡ ಕಟ್ಟಲಾಗಿದೆ. ಈ ಪ್ರದೇಶದ ಸುತ್ತಲಿನ ಮಕ್ಕಳ ಶಿಕ್ಷಣಕ್ಕೆ ನೆರವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net