ಪಿಂಚಣಿ ಅದಾಲತ್

Published on

ಬಳ್ಳಾರಿ: ನಗರದ ಪ್ರಾದೇಶಿಕ ಕಚೇರಿಯಲ್ಲಿ ಏ.15 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ತಿಳಿಸಿದ್ದಾರೆ.

ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅದಿಕಾರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ಪಿ.ಪಿ.ಒ ಸಂಖ್ಯೆ, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಮತ್ತು ಕುಂದು ಕೊರತೆಯ ಸ್ವರೂಪವ ಹಾಗೂ ಇತ್ಯಾದಿಗಳನ್ನು ಏ.11 ರೊಳಗೆ ತಿಳಿಸಬಹುದು. ಪತ್ರ ಲಕೋಟೆ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು. ಮಾಹಿತಿಗೆ ದೂ.08392-268943 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net