ಪಕ್ಷ ಸಂಘಟನೆಯೇ ಮೊದಲ ಗುರಿ: ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿಕೆ

Meenahalli Tayanna
ಮೀನಳ್ಳಿ ತಾಯಣ್ಣ
Published on

ಬಳ್ಳಾರಿ: ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟಿಸುವುದೇ ನನ್ನ ಮೊದಲ ಗುರಿ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿದರು.

ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಪರಿಷತ್ ಚುನಾವಣೆ ಮುಗಿದ ಕೂಡಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ, ಮುಂಬರುವ ಚುನಾವಣೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಾಗುವುದು. ಸ್ಥಳೀಯ ಸಂಸ್ಥೆಗಳ ಪೈಕಿ ಕುರುಗೋಡು ಮತ್ತು ಕುರೇಕುಪ್ಪ ಪುರಸಭೆಯ ಎಲ್ಲ ವಾರ್ಡ್‌ಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಇಳಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಅಸಂಖ್ಯ ಜೆಡಿಎಸ್ ಅಭಿಮಾನಿಗಳು ಹಾಗೂ ಪಕ್ಷ ಬೆಂಬಲಿತ ಸದಸ್ಯರಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂಬ ವಿಚಾರವನ್ನು ಆಯಾ ತಾಲೂಕು ಅಧ್ಯಕ್ಷರ ನಿರ್ಧಾರಕ್ಕೆ ಬಿಟ್ಟಿರುವೆ. ನಾವು ಇಂತವರಿಗೆ ಬೆಂಬಲ ನೀಡಿ ಎಂದು ಎಲ್ಲೂ ಹೇಳುವುದಿಲ್ಲ. ಪಕ್ಷದ ಹಿತಕ್ಕಾಗಿ ತಾಲೂಕು ಅಧ್ಯಕ್ಷರಿಗೆ ಯಾವ ಪಕ್ಷ ಬೇಕಾದರೂ ಬೆಂಬಲಿಸುವ ಅವಕಾಶ ನೀಡಿದ್ದೇವೆ ಎಂದರು. ಮುಖಂಡರಾದ ಲಕ್ಷ್ಮೀಕಾಂತರೆಡ್ಡಿ, ಕುರೇಕುಪ್ಪ ಸೋಮಪ್ಪ, ಮುನ್ನಬಾಯಿ, ವಾದಿರಾಜ್ ಶೆಟ್ಟಿ, ಗೋಪಾಲ, ಬಂಡೆಗೌಡ, ರಸೂಲ್ ಸಾಬ್, ಯಲ್ಲನಗೌಡ, ಪರಮೇಶ್ವರ ನಾಯ್ಕ, ವಿಜಯಕುಮಾರ್, ಪುಷ್ಪಾ, ರಾಮೇಶ್ವರಿ, ವಿಜಯಿಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net