ಬಿಜೆಪಿ ಜಯಭೇರಿ, ಕಾರ್ಯಕರ್ತರ ವಿಜಯೋತ್ಸವ

100322 Ballari 5State Election BJP Victory Celebration
ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
Published on

ಬಳ್ಳಾರಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ 4ರಾಜ್ಯಗಳಲ್ಲಿ ಬಿಜೆಪಿ ವಿಜಯಭೇರಿ ಬಾರಿಸಿದ ಹಿನ್ನೆಲೆ ನಗರದ ಎಸ್‌ಪಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಕಚೇರಿ ಎದುರು ನೂರಾರು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ದೇಶದ ಪರ ಘೋಷಣೆ ಕೂಗುತ್ತ ತಮಟೆ ಬಾರಿಸಿ ಸಂಭ್ರಮಿಸಿದರು. ವೃತ್ತದ ಕಡೆ ಸಾಗಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ಹಿರಿಯ ಮುಖಂಡ ರಾಮಲಿಂಗಪ್ಪ, ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣಮ್ಮ, ನಗರ ಅಧ್ಯಕ್ಷ ಕೆ.ಬಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ಜಿಲ್ಲಾ ಮಾದ್ಯಮ ಸಹ ಪ್ರಮುಖ ರಾಜೀವ್ ತೊಗರಿ, ಪುಷ್ಪಲತಾ, ಸುಗುಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net