ಆನ್‌ಲೈನ್ ವಂಚನೆ, ಆರೋಪಿ ವಶ

Published on

ಬಳ್ಳಾರಿ : ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ವಂಚಿಸಿದ್ದ ಆರೋಪಿಯನ್ನು ಬಂಧಿಸಿ, ಐದು ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ವಿಜಯನಗರ ಜಿಲ್ಲೆಯ ರಂಜಿತ ಬಂಧಿತ ಆರೋಪಿ. ಇಲ್ಲಿನ ಎಸ್‌ಎನ್ ಪೇಟೆಯ ನಿವಾಸಿ ವಿ.ಎಸ್.ಲಕ್ಷ್ಮೀ ಎಂಬುವವರಿಗೆ ಸ್ಟಾಕ್ ಮಾರುಕಟ್ಟೆಯ ಲಾಭಾಂಶ ಆಸೆ ತೋರಿಸಿ 17 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಆನ್‌ಲೈನ್ ಮೂಲಕ ಆರೋಪಿ ಖಾತೆಗೆ ಜಮೆ ಮಾಡಿಕೊಂಡಿದ್ದ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net