ಅಧಿಕಾರಿಗಳ ಧೋರಣೆಗೆ ಆಕ್ರೋಶ: ಸಮುದಾಯ ಆರೋಗ್ಯ ನೌಕರರಿಂದ ಪ್ರತಿಭಟನೆ

191122 Ballari State Community Health Employees Association Protest
ಬಳ್ಳಾರಿಯ ಡಿಎಚ್‌ಒ ಕಚೇರಿ ಎದುರು ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
Published on

ಬಳ್ಳಾರಿ: ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಧೋರಣೆ ವಿರೋಧಿಸಿ ಹಾಗೂ ಶಾಸನಬದ್ಧ ಹಕ್ಕುಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದಿಂದ ನಗರದ ಡಿಎಚ್‌ಒ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯಾದ್ಯಂತ ಕೆಲವು ಅರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮಾರ್ಗಸೂಚಿ ಅನ್ವಯ ಸರಿಯಾದ ರೀತಿಯಲ್ಲಿ ಔಷಧ ಇರುವುದಿಲ್ಲ. ಇದರ ಬಗ್ಗೆ ರಾಜ್ಯಮಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ದಿನನಿತ್ಯದ ಕರ್ತವ್ಯವನ್ನು ಹೊರತುಪಡಿಸಿ ಸಿಎಚ್‌ಒಎಸ್‌ರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರೆ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ದಿನನಿತ್ಯದ ಚುಟುವಟಿಕೆಗಳು ಹಾಗೂ ಕಾರ್ಯಗಳು ಕುಂಠಿತಗೊಳ್ಳುತ್ತಿದೆ. ರಾಜ್ಯ ಸರ್ಕಾರ ಸಮುದಾಯದ ಆರೋಗ್ಯ ಅಧಿಕಾರಿಗಳು ಅವರ ಕರ್ತವ್ಯ ಏನಿದೆ ಅದನ್ನು ಮಾತ್ರ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೆ, ಇಲಾಖೆಯು ತಮಗೆ ಬೇಕಾದ ಕಡೆಯಲ್ಲಿ ನಮ್ಮನ್ನು ನಿಯೋಜನೆ ಮಾಡುತ್ತಾರೆ. ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಎಂಟು ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಹದಿನೈದು ಸಾವಿರ ರೂ. ಗೆ ಹೆಚ್ಚಿಸಬೇಕು. ಜನ ಆರೋಗ್ಯ ಸಮಿತಿ ರಚಿಸಿ, ನಿಯಾಮವಳಿ ಪ್ರಕಾರ ಮುಕ್ತ ನಿಧಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು. ರಾಜ್ಯದಲ್ಲಿ 6,182 ಸಮುದಾಯದ ಅರೋಗ್ಯ ಅಧಿಕಾರಿಗಳು ಇದ್ದು, ಮೇಲಾಧಿಕಾರಿಗಳ ಕಿರಕುಳದಿಂದ ಬೇಸತ್ತಿದ್ದು, ಕೂಡಲೇ ಅಧಿಕಾರಿಗಳ ಮೇಲೆ ಕ್ರಮವಹಿಸಬೇಕು ಎಂದರು.
ಅಧ್ಯಕ್ಷೆ ಸುಮಿಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮುತ್ತಮ್ಮ, ಕಾರ್ಯದರ್ಶಿ ರವಿಕುಮಾರ್, ಸದಸ್ಯರಾದ ತಿಮ್ಮರಾಜ, ಪ್ರಿಯಮಣಿ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net