ಬಳ್ಳಾರಿಯಲ್ಲಿ ಶುಶ್ರೂಷಕನಿಗೂ ಕರೊನಾ ಸೋಂಕು ದೃಢ, ವಾರಿಯರ್‌ಗೆ ತಗುಲಿದೆ ಮೊದಲ ಪ್ರಕರಣ

corona
Published on

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ಶುಶ್ರೂಷಕನಿಗೆ ಕರೊನಾ ಸೋಂಕು ತಗುಲಿದೆ. ಇದು ಜಿಲ್ಲೆಯಲ್ಲಿ ಕರೊನಾ ವಾರಿಯರ್‌ಗೆ ಸೋಂಕು ತಗುಲಿರುವ ಮೊದಲ ಪ್ರಕರಣವಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್‌ನಲ್ಲಿ ಇವರು ಕೆಲಸ ಮಾಡುತ್ತಿದ್ದರು. 14 ದಿನಗಳ ಕೆಲಸದ ಬಳಿಕ ನಿಯಮದಂತೆ 14 ದಿನದ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದರು. ಕ್ವಾರಂಟೈನ್‌ನಲ್ಲಿದ್ದಾಗ ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಸೋಂಕಿತನಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ. ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಶುಶ್ರೂಷಕ ಕಾರ್ಯನಿರ್ವಹಿಸಿದ್ದ. ಇದರಿಂದಾಗಿ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net