ಅರ್ಹತಾ ಪತ್ರ ನವೀಕರಿಸಲು ಸೂಚನೆ

Published on

ಬಳ್ಳಾರಿ: ಜಿಲ್ಲೆಯ ನಾನಾ ಶಾಲಾ ಮತ್ತು ಕಾಲೇಜುಗಳು ವಾಹನಗಳ ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಕಾರಿ ಬಿ.ಎಸ್.ಶ್ರೀನಿವಾಸಗಿರಿ ತಿಳಿಸಿದ್ದಾರೆ. ಅರ್ಹತಾ ಪತ್ರ ನವೀಕರಿಸಿಕೊಳ್ಳಲು ಈಗಾಗಲೇ ಆಯಾ ಶಾಲಾ-ಕಾಲೇಜುಗಳ ೧೨೦ ವಾಹನಗಳ ಶಾಲಾ-ಕಾಲೇಜು ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ ೧೧ ವಾಹನಗಳು ಅನುಪಯುಕ್ತತೆಗೊಳಿಸಿ ೨೮ ವಾಹನಗಳಿಗೆ ಅರ್ಹತಾ ಪತ್ರ ನವೀಕರಿಸಲಾಗಿದೆ. ಒಟ್ಟು ೬ ಶಾಲಾ-ಕಾಲೇಜುಗಳ ವಾಹನಗಳನ್ನು ತನಿಖೆ ಮಾಡಿ ತನಿಖಾ ವರದಿ ನೀಡಲಾಗಿದೆ. ಹಾಗಾಗಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ತಮ್ಮ ಶಾಲಾ-ಕಾಲೇಜುಗಳ ವಾಹನಗಳ ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net