ಸ್ವಾತಂತ್ರೃಕ್ಕಾಗಿ ರಕ್ತ ತರ್ಪಣ ನೀಡಿದ ಸುಭಾಷ್‌ಚಂದ್ರ

23012022 Bellary Netaji Subhash Chandra Bose Birthday Celbrate
Published on

ಬಳ್ಳಾರಿ: ಸ್ವಾತಂತ್ರ್ಯ ಜ್ಯೋತಿಗೆ ತನ್ನ ರಕ್ತ ತರ್ಪಣ ಮಾಡಿದ ಧೀರ, ವಿದ್ಯಾರ್ಥಿ-ಯುವಜನರ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ ಸ್ವಾತಂತ್ರ್ಯ ಸಂಗ್ರಾಮದ ನೇತಾರ ಸುಭಾಷ್ ಚಂದ್ರ ಬೋಸ್ ಎಂದು ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಬಣ್ಣಿಸಿದರು.

ಎಐಡಿಎಸ್‌ಒ, ಎಐಡಿವೈಒ, ಎಐಎಂಎಂಎಸ್ ಸಂಘಟನೆಗಳಿಂದ ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮದಿನ ಆಚರಣೆ ವೇಳೆ ಮಾತನಾಡಿದರು. ಎಐಎಂಎಂಎಸ್ ಜಿಲ್ಲಾಧ್ಯಕ್ಷೆ ಕೆ.ಎಂ.ಈಶ್ವರಿ ಮಾತನಾಡಿ, ಯಾವುದೇ ಅನ್ಯಾಯ ಅಥವಾ ಶೋಷಣೆ ಘಟಿಸಿದಾಗ ಧ್ಯೆರ್ಯವಾಗಿ ತಲೆಯೆತ್ತಿ ಅದನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳವುದಕ್ಕಿಂತ ದೊಡ್ಡ ಅಪಾರಾಧ ಇನ್ನೊಂದಿಲ್ಲ ಎಂದು ನೇತಾಜಿ ರವರು ಹೇಳುತ್ತಾರೆ. ಐಎನ್‌ಎ ಕಟ್ಟಿ ಹೆಣ್ಣು ಮಕ್ಕಳು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿದ ಮಹಾನ್ ವ್ಯಕ್ತಿ ಎಂದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಜೆ.ಪಿ.ರವಿಕಿರಣ್ ಮಾತನಾಡಿ, ಶಿಕ್ಷಣದ ವ್ಯಾಪರೀಕರಣ, ಹಸಿವಿನ ಆಕ್ರಂದನ, ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ಅಪಮಾನ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ-ಅನ್ಯಾಯವನ್ನು ಕೊನೆಗಾಣಿಸಬೇಕು. ಎಲ್ಲ ಮಾನವರು ಸಂತಸದಿ ಸಮನಾಗಿ ತಲೆಯೆತ್ತಿ ಬದುಕುವ ನೇತಾಜಿ ಕನಸಿನ ಸಮಾಜವಾದಿ ಭಾರತ ಕಟ್ಟುವ ಸಂಕಲ್ಪ ಮಾಡೋಣ ಎಂದರು.

ಸಂಘಟನೆಗಳ ಸದಸ್ಯರಾದ ಗುರಳ್ಳಿರಾಜ, ವಿಜಯಲಕ್ಷ್ಮಿ ದೇವತ್ಕಲ್, ಕೆ.ಈರಣ್ಣ, ಎಂ.ಶಾಂತಿ, ಕಂಬಳಿ ಮಂಜುನಾಥ, ಅನುಪಮಾ, ನಿಹಾರಿಕ, ಉಮಾದೇವಿ, ಪ್ರಮೋದ್, ರೇಖಾ, ವಿದ್ಯಾವತಿ, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net