ಬಳ್ಳಾರಿ : ಇಲ್ಲಿನ ಆಟಲ್ ಬಿಹಾರಿ ವಾಜಪೇಯಿ ಬಡಾವಣೆಯ ರಂಗತೋರಣ ಮಂಟಪದಲ್ಲಿ ಡಿ.10 ಹಾಗೂ 11 ರಂದು ನೀನಾಸಮ್ ನಾಟಕೋತ್ಸವನ್ನು ಆಯೋಜಿಸಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹವ್ಯಾಸಿ ರಂಗಭೂಮಿಯಲ್ಲಿ ದೇಶ-ವಿದೇಶ ನಾಟಕಗಳನ್ನು ಹೊಸ ಹೊಸ ಸಾಹಿತ್ಯಗಳೊಂದಿಗೆ ಪ್ರಯೋಗಿಸುತ್ತ ನಾಟಕ ರಂಗದಲ್ಲಿ ನೀನಾಸಂ ಎನ್ನುವ ಬ್ರಾಂಡ್‌ನ್ನು ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಹೆಗ್ಗೋಡಿನಲ್ಲಿರುವ ನೀನಾಸಂ. 40 ವರ್ಷ ಅಪ್ರತಿಮ ವರ್ಷಗಳ ನೀನಾಸಂ ಈ ಬಾರಿ ಎರಡು ಪ್ರಮುಖ ನಾಟಕಗಳೊಂದಿಗೆ ನಾಡಿನಲ್ಲಿ ತಿರುಗಾಟ ಹೊರಟಿದೆ ಎಂದು ತಿಳಿಸಿದರು.
ಡಿ.10 ರಂದು ನಡೆಯುವ ಮಾಲತೀ ಮಾವ ನಾಟಕವನ್ನು ನಾಟಕಕಾರ ವೂತಿ ಅವರು ರಚಿಸಿದ್ದು, ಕೆ.ವಿ.ಆಕ್ಷರ ಅವರು ನಿರ್ದೇಶಿಸಿದ್ದಾರೆ. ಡಿ.11 ರಂದು ನಡೆಯುವ ಅಂಕದ ಪರದೆ ಎನ್ನುವ ತಮಿಳು ನಾಟಕವನ್ನು ಅಭಿರಾಮ ಡ್ಕಮ್ಕರ್ ರಚಿಸಿದ್ದು, ಕನ್ನಡಕ್ಕೆ ಜಯಂತ ಕಾಯ್ಕಿಣಿ ಅನುವಾದಿಸಿದ್ದಾರೆ. ವಿದ್ಯಾನಿ ವನಾರಸೆ ಅವರು ನಿರ್ದೇಶಿಸಿದ ನಾಟಕವಾಗಿದೆೆ. ನೀನಾಸಮ್ ನಾಟಕೋತ್ಸವವನ್ನು ನಿವೃತ್ತ ಪ್ರಾಚಾರ್ಯ ಮೆಹತಾಬ್ ಹಾಗೂ ಟಿ.ರಾಜಗೌಡ ಅವರು ಉದ್ಘಾಟಿಸಲಿದ್ದಾರೆ ಎಂದರು. ಪ್ರಮುಖರಾದ ರಂಗತೋರಣದ ಸದಸ್ಯ ಅಡವಿ ಸ್ವಾಮಿ, ಜಿಲ್ಲಾ ಕಲಾವಿದರು ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ, ಕಾರ್ಯದರ್ಶಿ ತಿಪ್ಪೇಸ್ವಾಮಿ ಇದ್ದರು.