ಬೆದರಿಕೆಗೆ ಬಗ್ಗುವ ಮಕ್ಕಳಲ್ಲ ನಾವು

05012020 Bellary SYED NASIR HUSSAIN
Published on

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಕಿಡಿ

ಬಳ್ಳಾರಿ: ಎನ್‌ಸಿಎ, ಎನ್‌ಆರ್‌ಸಿ ವಿರುದ್ಧ ನಾವು ಮುಂದೆಯೂ ನಗರ ಸೇರಿ ವಿವಿಧೆಡೆ ಪ್ರತಿಭಟನೆ ಮಾಡುತ್ತೇವೆ. ಯಾವ ಹೆದರಿಕೆಗೂ ಬಗ್ಗಲ್ಲ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಎಚ್ಚರಿಸಿದರು.

ಯಾವುದೇ ತಪ್ಪು ಮಾಡದ ಶಾಸಕ ಯು.ಟಿ.ಖಾದರ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಸೋಮಶೇಖರೆಡ್ಡಿ ಬಂಧನಕ್ಕೆ ಯಾವ ಕಾನೂನು ಅಡ್ಡಿ ಬರುತ್ತಿದೆ? ಸರ್ಕಾರದ ಆಡಳಿತ ನೋಡಿದರೆ, ನಾವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಬಗ್ಗೆ ಅನುಮಾನ ಬರುತ್ತಿದೆ. ಶಾಸಕರು ಈ ದೇಶದ ಇತಿಹಾಸ, ಸಂಸ್ಕೃತಿ ತಿಳಿದುಕೊಳ್ಳಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ವಿಪ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಆರ್‌ಎಸ್‌ಎಸ್ ದೇಶದ ಸ್ವಾತಂತ್ರೃಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಂಥ ಸಂಘಟನೆಯಿಂದ ಪ್ರೇರಣೆ ಪಡೆದ ಸೋಮಶೇಖರರೆಡ್ಡಿ ಇನ್ನಾದರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ರೆಡ್ಡಿ ಬಂಧನಕ್ಕೆ ಹಿಂದೇಟು ಹಾಕುತ್ತಿರುವ ಪೊಲೀಸರ ವರ್ತನೆ ಸರಿಯಲ್ಲ. ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ವಿಪ ಸದಸ್ಯ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಆಂಜನೇಯಲು, ಮಾನಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net