ಬಳ್ಳಾರಿ, ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆ, ಜಿಲ್ಲೆಗೆ 7 ಪದಕ

Published on

ಬಳ್ಳಾರಿ : ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಅ. 19 ರಿಂದ 22 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಜಿಲ್ಲೆಗೆ 1 ಚಿನ್ನ, 4 ಬೆಳ್ಳಿ, 2 ಕಂಚು ಸೇರಿ ಒಟ್ಟು 7 ಪದಕ ಲಭಿಸಿವೆ.

ಜಿಲ್ಲೆಯನ್ನು ಪ್ರತಿನಿಧಿಸಿದ ಈಜು ಸ್ಪರ್ಧಾಳುಗಳಾದ ಸಾಯಿ ನಿಖಿಲ್, ಗೋಪಿಚಂದ್, ಬೇಬಿ ಸಾಯಿ, ಕವಿತಾ ಭಾಗವಹಿಸಿದ್ದರು. ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಸಾಯಿ ನಿಖಿಲ್‌ಗೆ ಚಿನ್ನ ಹಾಗೂ ಕಂಚು ಒಂದು, ಗೋಪಿಚಂದ್ ಮೂರು ಬೆಳ್ಳಿ , ಬೇಬಿ ಸಾಯಿ ಒಂದು ಬೆಳ್ಳಿ, ಕವಿತಾ ಒಂದು ಕಂಚು ಪದಕ ಪಡೆದುಕೊಂಡಿದ್ದಾರೆ. ರಜನಿ ಲಕ್ಕ, ಶರತ್ ಗಾಯಕ್ವಾಡ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net