ನಂದಿನಿ ಉತ್ಪನ್ನಗಳಿಗೆ ಶೇ.20 ರಿಯಾಯಿತಿ- ರಾಬಕೊವಿ ನಿರ್ದೇಶಕ ಜಿ.ವೀರಶೇಖರರೆಡ್ಡಿ ಮಾಹಿತಿ

191222 Ballari nandini Products
ಬಳ್ಳಾರಿಯ ಪಟೇಲ್ ನಗರದ ನಂದಿನಿ ಎಟಿಎಂ ಪಾರ್ಲರ್ ಬಳಿ ಉತ್ಪನ್ನಗಳನ್ನು ರಾಬಕೊವಿ ನಿರ್ದೇಶಕ ಜಿ.ವೀರಶೇಖರರೆಡ್ಡಿ ಪ್ರದರ್ಶಿಸಿದರು.
Published on

ಬಳ್ಳಾರಿ: ಪ್ರತಿ ವರ್ಷ ಸಿಹಿ ಉತ್ಸವದಲ್ಲಿ ನಂದಿನಿ ಉತ್ಪನಗಳ ಮೇಲೆ ಶೇ.10 ರಿಯಾಯಿತಿ ನೀಡಲಾಗುತ್ತಿತ್ತು. ವಿಶೇಷವಾಗಿ ಈ ಅವಧಿಯ ಸಿಹಿ ಉತ್ಸವದಲ್ಲಿ ಶೇ.20 ರಿಯಾಯಿತಿ ನೀಡಲಾಗುತ್ತಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರರೆಡ್ಡಿ ಹೇಳಿದರು.

ಪಟೇಲ್‌ನಗರದಲ್ಲಿನ ನಂದನಿ ಎಟಿಎಂ ಪಾರ್ಲರ್ ಆವರಣದಲ್ಲಿ ಸೋಮವಾರ ‘ನಂದಿನಿ ಸಿಹಿ ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯಾದ್ಯಾಂತ 14 ಒಕ್ಕೂಟಗಳಿದ್ದು ಕಹಾಮ ವತಿಯಿಂದ ಎಲ್ಲ ಒಕ್ಕೂಟಗಳಲ್ಲೂ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಉತ್ಸವವು ಡಿ.19 ರಿಂದ ಜ.19 ರವರೆಗೆ ನಡೆಯಲಿದೆ. 70 ಉತ್ಪನ್ನಗಳಲ್ಲಿ 30 ಸಿಹಿ ನಂದಿನಿ ಉತ್ಪನ್ನಗಳಿವೆ ಎಂದರು.

ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜಿ.ಬಿ.ಉದಯಕುಮಾರ ಮಾತನಾಡಿ, ಒಕ್ಕೂಟಕ್ಕೆ ಲಾಭ ಮಾಡುವುದೆ ಮುಖ್ಯ ಉದ್ದೇಶವಾಗಿರದೆ ರೈತರ ಹಿತ ರಕ್ಷಣೆ, ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶ. ಮನೆಗಳಲ್ಲಿ ನಂದಿನಿ ಹಾಲಿನ ವಿವಿಧ ಮಾದರಿಗಳನ್ನು ಬಳಸುವಂತೆ ಮನವಿ ಮಾಡಿದರು.

ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ವೆಂಕಟೇಶ್ ಗೌಡ, ಐ.ಎನ್.ಮುರಳೀಧರ, ಒಕ್ಕೂಟದ ವಿವಿಧ ವಿಭಾಗದ ಅಧಿಕಾರಿಗಳಾದ ನಾಗರಾಜಶರ್ಮ, ಶಂಬು ಕುಮಾರ್, ವೆಂಕಟೇಶ್ ಜವಳಿ, ತಿಪ್ಪೇಸ್ವಾಮಿ, ಸಿಬ್ಬಂದಿ ಸಿ.ಎನ್.ಮಂಜುನಾಥ, ಬಾಬು.ಬಿ, ಎಟಿಎಂ ಪಾರ್ಲರ್‌ನ ಎಚ್.ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net