ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ನನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಎಂಆರ್ ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಂಗಳವಾರ ರಾತ್ರಿ ಒಳಪಡಿಸಲಾಯಿತು.
ಕಳೆದ ಕೆಲ ದಿನಗಳ ಹಿಂದ ದರ್ಶನ ಬೆನ್ನು ನೋವಿನಿಂದ ಬಳಲುತ್ತಿದ್ದು ಅರ್ಥೋ ಹಾಗೂ ನ್ಯೊರೋ ವೈದ್ಯರು ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಇದರನ್ವಯ ಎಂಆರ್ ಐ ಹಾಗೂ ಸಿಟಿ ಸ್ಕ್ಯಾನಿಂಗ್ ವರದಿ ಆಧಾರದ ಮೇಲೆ ಸರ್ಜರಿ ಮಾಡಬೇಕು ಅಥವಾ ಮಾತ್ರೆ ನೀಡಿ ನಿವಾರಿಸಬಹುದು ಎಂಬುದರ ವೈದ್ಯರ ಬಗ್ಗೆ ತಿಳಿಸಲಿದ್ದಾರೆ. ಬಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಬಸರೆಡ್ಡಿ ಜೈಲಿಗೆ ಭೇಟಿ ತಪಾಸಣೆ ನಡೆಸಿ ಬಿಮ್ಸ್ ಸ್ಥಳಾಂತರಿಸಲು ಸೂಚಿಸಿದರು. ಬಳಿಕ ದರ್ಶನ್ ಬಿಮ್ಸ್ ಗೆ ಕರೆದೊಯ್ಯುವ ವೇಳೆ ನಾಲ್ಕು ಪೊಲೀಸ್ ವಾಹನಗಳೊಂದಿಗೆ ಬಿಗಿ ಬಂದೋ ಬಸ್ತ್ ವಹಿಸಲಾಗಿತ್ತು. ದಾರಿಯುದ್ದಕ್ಕೂ ಅಭಿಮಾನಿಗಳು ದರ್ಶನ್ ಯಿರುವ ಅಂಬುಲೆನ್ಸ್ ಹಿಂಬಾಲಿಸುತ್ತ ಜೈ ಡಿ ಬಾಸ್ ಎಂದು ಘೋಷಣೆ ಕೂಗುತ್ತಾ ಬೈಕ್ ಚಲಾಯಿಸಿಕೊಂಡು ಬಂದರು. ಸಿಟಿ ಹಾಗೂ ಎಂಆರ್ ಐ ಸ್ಕ್ಯಾನಿಂಗ್ ಒಳಪಡಿಸಿದ ಬಳಿಕ ದರ್ಶನ್ ಅವರನ್ನು ಮರಳಿ ಜೈಲಿಗೆ ಕರೆ ತಂದು ಸೆಲ್ ಗೆ ಕಳುಹಿಸಲಾಯಿತು. ಇದಕ್ಕೂ ಮುನ್ನ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಸಂಜೆ ಆಗಮಿಸಿದ್ದರು.
ಕಳೆದ ಕೆಲ ದಿನಗಳ ಹಿಂದ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನಲೆ ಪತ್ನಿ ವಿಜಯಲಕ್ಷ್ಮೀ ಹಾಗೂ ಸಂಬಂಧಿ ಸುಶಾಂತ್ ನಾಯ್ಡು ದರ್ಶನ್ ಆರೋಗ್ಯ ವಿಚಾರಿಸಲು ಬಟ್ಟೆ, ತಿಂಡಿ ತಿನಿಸುಗಳ ಎರಡು ಬ್ಯಾಗ್ ಗಳನ್ನು ತಂದಿದ್ದರು. ದರ್ಶನ್ ಅವರನ್ನು ಹೈ ಸೆಕ್ಯೂರಿಟಿ ಸೆಲ್ ನಿಂದ ಕರೆ ತಂದು ಸಂದರ್ಶಕರ ಕೋಣೆಗೆ ಕಳುಹಿಸಲಾಯಿತು. ಜಾಮೀನು ಅರ್ಜಿ ವಿಚಾರಣೆ, ಆರೋಗ್ಯದ ಬಗ್ಗೆ ಪತ್ನಿ ಜತೆ ಅರ್ಧಗಂಟೆವರೆಗೆ ಚರ್ಚಿಸಿ ಬಳಿಕ ಎರಡು ಬ್ಯಾಗ್ ಗಳನ್ನು ತೆಗೆದುಕೊಂಡು ದರ್ಶನ್ ಸೆಲ್ ಗೆ ಹೊರಟರು.