

ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ಅವರ ಎಂಆರ್‌ಐ ಹಾಗೂ ಸಿಟಿ ಸ್ಕಾೃನಿಂಗ್ ವರದಿಯನ್ನು ವೈದ್ಯರು ಜೈಲು ಅಧಿಕಾರಿಗಳಿಗೆ ಬುಧವಾರ ತಲುಪಿಸಿದ್ದಾರೆ.
ದಿನೇ ದಿನೇ ಬೆನ್ನು ನೋವಿನ ಸಮಸ್ಯೆ ಹೆಚ್ಚಾದ ಹಿನ್ನಲೆ ಕುಟುಂಬದ ಹಾಗೂ ಜೈಲು ಅಧಿಕಾರಿಗಳಿಗೆ ಮನವಿಗೆ ಒಪ್ಪಿ ನ್ಯೂರೋ ತಜ್ಞ ಡಾ. ವಿಶ್ವನಾಥ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಬಸರೆಡ್ಡಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಬಿಮ್ಸ್‌ನಲ್ಲಿ ಸ್ಕಾೃನಿಂಗ್‌ಗೆ ಒಳಪಡಿಸಲಾಯಿತು.
ದರ್ಶನ್‌ಗೆ ಬೆನ್ನು ನೋವಿನ ಡಿಸ್ಕ್ ( ಸಯಾಟಿಕ್) ಎಂಬ ಗಮರ್ನಾಹ ಸಮಸ್ಯೆಯಿದ್ದು ಕೂಡಲೇ ಚಿಕಿತ್ಸೆಗೆ ಒಳಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ವೈದ್ಯಕೀಯ ವರದಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿದವು.
ಮುಂದಿನ ವಾರದಲ್ಲಿ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ನೀಡಲಿದ್ದು ವರದಿ ಆಧಾರಿಸಿ ಸರ್ಜರಿ ಬಗ್ಗೆ ದರ್ಶನತಿರ್ಮಾನ ಕೈಗೊಳ್ಳಬಹುದು. ಸದ್ಯ, ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಬಳ್ಳಾರಿ ಜೈಲು ಅಧಿಕಾರಿಗಳಿಗೆ ಮಂಗಳವಾರ ಹೈ ಕೋರ್ಟ್ ಆದೇಶಿಸಿದೆ.
ಆದರೆ, ಈವರೆಗೆ ನಮಗೆ ಯಾವುದೆ ಲಿಖಿತ ಪತ್ರ ಮೂಲಕ ಆದೇಶ ಬಂದಿಲ್ಲ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.