ಬಳ್ಳಾರಿ : ಇಲ್ಲಿನ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯಕ್ಕೆ ಮಾಜಿ ಸಚಿವ ದಿ. ಎಂ.ಪಿ. ಪ್ರಕಾಶ ಹೆಸರನ್ನು ನಾಮಕರಣಗೊಳಿಸುವಂತೆ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಎಂ.ಪಿ.ಪ್ರಕಾಶ್ ಹತ್ತು ಹಲವು ಮಾನವೀಯ ಗುಣಗಳ ಸಮನ್ವಯತೆ ಸಾದಿಸಿದ್ದ ಇವರು ಸಾಂಸ್ಕ್ರತಿಕ ಹಿನ್ನಲೆಯವರಾಗಿದ್ದು. ರಂಗಭಾರತಿ ಸ್ಥಾಪನೆ ಮೂಲಕ ತಮ್ಮ ರಾಜಕೀಯ ಕರ್ಮಭೂಮಿಯಾದ ಹೂವಿನಹಡಗಲಿಯಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದರೂ ಜಿಲ್ಲಾ ಸಚಿವರಾಗಿದ್ದಾಗ ಬಳ್ಳಾರಿ ನಗರದಲ್ಲಿ ಅದ್ಭುತವಾದ ಸಾಂಸ್ಕೃತಿಕ ಸಮುಚ್ಚಯವನ್ನು ನಿರ್ಮಾಣ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ