ಹಿಂದುಗಳಿಂದಲೇ ನಿರ್ಮಾಣವಾದ ದರ್ಗಾ: ಬಳ್ಳಾರಿ ತಾಲೂಕಿನ ಜಾಲಿಹಾಳು ಗ್ರಾಮದಲ್ಲಿ ತಲೆ ಎತ್ತಿದ ಹೊನ್ನೂರಸ್ವಾಮಿ ಮಸೀದಿ

10082021 Bellary Honnurswamy darga
Published on

ಬಳ್ಳಾರಿ: ಮೊಹರಂ ಪ್ರಯುಕ್ತ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡ ಮೋಕಾ ಹೋಬಳಿ ವ್ಯಾಪ್ತಿಯ ಜಾಲಿಹಾಳು ಗ್ರಾಮದಲ್ಲಿ ಹಿಂದುಗಳೇ ಹೊಸದಾಗಿ ನಿರ್ಮಿಸಿದ ಹೊನ್ನೂರ ಸ್ವಾಮಿ ದರ್ಗಾ ಸೋಮವಾರ ಉದ್ಘಾಟನೆಗೊಂಡಿತು.

ಗ್ರಾಮದ ಲಿಂಗಾಯತ ಸಮುದಾಯದ ಭಕ್ತರು ನೀಡಿದ 30 ಲಕ್ಷ ರೂ. ದೇಣಿಗೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ. ಗಂಗಾವತಿ ತಾಲೂಕಿನ ಹೆಬ್ಬಾಳು ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಸೀದಿಗೆ ಚಾಲನೆ ನೀಡಿದರು. ಮೊಹರಂ ಮುಸ್ಲಿಮರ ಹಬ್ಬವಾದರೂ ಹಿಂದೂಗಳೇ ಹೆಚ್ಚಾಗಿ ಆಚರಿಸುತ್ತಾರೆ. ಹೀಗಾಗಿಯೇ ನಾಡಿನಲ್ಲಿ ಹಿಂದು-ಮುಸ್ಲಿಮರು ಸಾಮರಸ್ಯದಿಂದ ಒಂದಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net