ಮೋದಿ, ಯೋಗಿ ಆಡಳಿತ ಮಾದರಿ

B Sriramulu Minister
Published on

ಬಳ್ಳಾರಿ: ಹಳ್ಳಿ ಹಳ್ಳಿಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾದರಿ ಆಡಳಿತ ಜಾರಿಯಾದಾಗ ಮಾತ್ರ ಅಭಿವೃದ್ಧಿಗೆ ಶರವೇಗ ದೊರೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ .ಶ್ರೀರಾಮುಲು ಹೇಳಿದರು.

ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ವರದಿ ಬಿಜೆಪಿ ಪರವಾಗಿ ಹೊರಬಿದ್ದ ಬಳಿಕ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಮಾದರಿಯಲ್ಲಿ ನಾವು ಆಡಳಿತ ಕೊಡುವ ಪ್ರಯತ್ನ ಮಾಡುತ್ತೇವೆ. ಮುಂದೆ ರಾಜ್ಯದಲ್ಲಿ ಅಂತಹ ಆಡಳಿತ ಬರಲಿದೆ. ಬಂದರೆ ಖಂಡಿತಾ ಪರಿಸ್ಥಿತಿ ಬದಲಾಗಲಿದೆ ಎಂದರು.

ಕಾಂಗ್ರೆಸ್ ಇನ್ಮುಂದೆ ಪಾಂಪ್ಲೇಟ್, ಬ್ಯಾನರ್ ಮತ್ತು ನಾಯಕರಿಗಷ್ಟೇ ಸೀಮಿತವಾಗಲಿದೆ. ಇದಕ್ಕೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಉಳಿಗಾಲವಿಲ್ಲ. ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಈಗಾಗಲೇ ಅದರ ಹಣೆಬರಹ ಗೊತ್ತಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಧೂಳಿಪಟವಾಗಲಿದೆ. ಆದರೆ, ಕಾಂಗ್ರೆಸ್‌ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕುಣಿತಾ ಇದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಕೇವಲ ೆಟೋ ಸಲುವಾಗಿ ಒಟ್ಟಾಗಿ ಇರುತ್ತಾರೆ. ೆಟೋ ಮುಗಿಯುತ್ತಲೇ ಇಬ್ಬರೂ ಒಂದೊಂದು ದಿಕ್ಕಿಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net