

ಬಳ್ಳಾರಿ: ಕೊನೇ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುವೆ. ಕಾಂಗ್ರೆಸ್‌ಗೆ ಹೋಗಲ್ಲ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ರಾಜಕೀಯದಲ್ಲಿ ಇರುವವರೆಗೂ ನಾನು ಬಿಜೆಪಿಯಲ್ಲೆ ಇರುವೆ. ಒಂದು ವೇಳೆ ರಾಜಕೀಯ ಬೇಡ ಅಂದರೆ ಮಾತ್ರ ಮನೆಯಲ್ಲಿ ಇರುವೆ. ಸಿದ್ದರಾಮಯ್ಯ ಬಳಿ ನನ್ನ ೈಲ್ ಹುಡುಕಲು ಹೋಗಿದ್ದೆ. ಆ ಸಮಯದಲ್ಲಿ ಪಕ್ಕದಲ್ಲಿದ್ದ ಶಾಸಕ ನಾಗೇಂದ್ರ ಕಾಂಗ್ರೆಸ್‌ಗೆ ಬರತೀರಾ ಅಂದ್ರು, ಬರುತ್ತೇನೆ ಅಂದೆಯಷ್ಟೆ, ಹೊರತಾಗಿ ಕಾಂಗ್ರೆಸ್ ಸೇರ್ಪಡೆಯಾಗುವೆ ಅಂತ ನಾನು ಎಲ್ಲಿಯೂ ಹೇಳಿಲ್ಲ. ಕೈ ಹೈಕಮಾಂಡ್ ನಮ್ಮ ಕುಟುಂಬಕ್ಕೆ ಕೊಟ್ಟ ಕಷ್ಟಗಳನ್ನು ಮರೆತಿಲ್ಲ. ಕಷ್ಟಗಳನ್ನು ಅನುಭವಿಸಿ ಕಾಂಗ್ರೆಸ್‌ಗೆ ಹೋಗತ್ತೇವೆ ಅಂದರೆ ನಮ್ಮಷ್ಟು ದಡ್ಡರು ಯಾರು ಇರಲ್ಲ ಎಂದು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.