ಸಚಿವ ಆನಂದಸಿಂಗ್ ವಿರುದ್ಧ ಶಾಸಕ‌ ಸೋಮಶೇಖರ ರೆಡ್ಡಿ ವಾಗ್ದಾಳಿ

Anand Sing
Anand Sing
Published on

ಬಳ್ಳಾರಿ:ಸಚಿವ ಆನಂದಸಿಂಗ್ ಅವರು ರಾಜಕೀಯ ಮಾಡೋದನ್ನ ಚೆನ್ನಾಗಿ ಕಲಿತಿದ್ದಾನೆ.‌ ನನ್ನ ಸಹೋದರ ಗಾಲಿ ಜನಾರ್ದನರೆಡ್ಡಿಯವ್ರು ಆತನಿಗೆ ಚೆನ್ನಾಗಿ‌ ರಾಜಕೀಯ‌ ಮಾಡೋದನ್ನ ಕಲಿಸಿದ್ದಾನೆಂದು ಬಳ್ಳಾರಿ ನಗರ ಶಾಸಕ ಗಾಲಿ‌ ಸೋಮಶೇಖರರೆಡ್ಡಿ ವಾಗ್ದಾಳಿ‌ ನಡೆಸಿದ್ದಾರೆ.

ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಇಲ್ಲೊಂದು ಮಾತನಾಡುತ್ತಾನೆ. ಅಲ್ಲೊಂದು ಮಾತನಾಡುತ್ತಾನೆ. ರಾಜಕೀಯ ಚೆನ್ನಾಗಿ ಮಾಡೋದನ್ನ ಕಲಿತಿದ್ದಾನೆಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಬಿಟ್ಟು ಕೊಡುವುದಲ್ಲ, ನಾವೇ ಬೇಡ ಅಂತಾ ಹೇಳಿದ್ದೇವೆ. ಈ ಜಿಲ್ಲೆ ಇಬ್ಬಾಗ ಮಾಡಿದವರು ಜಿಲ್ಲಾ ಉಸ್ತುವಾರಿ ಸಚಿವರಿರುವುದು ನಮಗೆ ಇಷ್ಟ ಇಲ್ಲ. ಇದನ್ನ ಸಿಎಂ ಬಿಎಸ್ ವೈ ಗಮನಕ್ಕೆ ತಂದಿದ್ದೇನೆ. ಸಚಿವ ಶ್ರೀರಾಮುಲು ಜಿಲ್ಲಾ ಉಸ್ತುವಾರಿಯಾದ್ರೆ ನಮಗೆ ಒಳ್ಳೆಯದು. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಅವಧಿಯಲ್ಲಿ ಅದಂತಹ ಅಭಿವೃದ್ಧಿ ರಾಮೂಲು ಅವಧಿಯಲ್ಲಿ ಆಗುವ ನಿರೀಕ್ಷೆಯಿದೆ. ರಾಮಮಂದಿರದಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗುತ್ತೆ, ಇತ್ತ ಬಳ್ಳಾರಿಗೆ ರಾಮುಲು ಬಂದ್ರೆ ಒಳ್ಳೆದಾಗುತ್ತೆ.‌ ಸಚಿವ ಆನಂದಸಿಂಗ್ ಒಳಗೊಂದು- ಹೊರಗೊಂದು ಮಾತನಾಡುತ್ತಾರೆ. ಅಖಂಡ ಜಿಲ್ಲೆಗಾಗಿ ಕಾನೂನು ಹೋರಾಟ ನಡೆಸುವವರಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು ಸೋಮಶೇಖರರಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net