ಡಿಎಂಎಫ್ ಅನುದಾನ ದುರ್ಬಳಕೆ

Published on

ಬಳ್ಳಾರಿ : ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಡಿಎಂಎಫ್ ಅನುದಾನದಡಿ ಅನಧಿಕೃತ ಸ್ಥಳದಲ್ಲಿ ಅಂಗನವಾಡಿ ನಿರ್ಮಿಸಿ ಹಣ ದುರ್ಬಳಕೆ ಮಾಡಿದೆ ಎಂಬುದಾಗಿ ಆರೋಪಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಸಂಡೂರಿನ ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗವು ಡಿಎಂಎಫ್ ಅನುದಾನದಲ್ಲಿ ಗ್ರಾಮಕ್ಕೆ ಸೇರಿದ ಸರ್ವೆ ನಂ.262( 6 ಎಕರೆ 16 ಸೆಂಟ್ಸ್) ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ ಅಕ್ರಮವಾಗಿ 20 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿರುವುದು ಜಿಲ್ಲಾಡಳಿತ ವ್ಯವಸ್ಥೆಯ ಬಹುದೊಡ್ಡ ಲೋಪವಾಗಿದೆ. ಕೃಷಿ ಜಮೀನನ್ನು ಕೃಷಿಯೇತರ ಬಳಕೆಗೆ ಭೂಪರಿವರ್ತನೆ ಮಾಡಿಸದೇ, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸದ ಅನುಮೋದನೆ ಪಡೆಯದೇ ಅಕ್ರಮವಾಗಿ ನಿರ್ಮಿಸಿರುವ ಖಾಸಗಿ ಬಡಾವಣೆಯಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಕಟ್ಟಡ ನಿರ್ಮಾಣವಾಗಿರುವ ನಿವೇರ್ಶನ ಮಾಲೀಕತ್ವಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳಾಗಲಿ, ಕಾನೂನಿನಂತೆ ನಿವೇಶನ ಒಡೆತನವನ್ನು ಸರ್ಕಾರಕ್ಕೆ ವರ್ಗಾಯಿಸಿದ ನೋಂದಾಯಿತ ಪತ್ರವಾಗಲೀ ಇಲ್ಲದೆ ಗಣಿಭಾದಿತ ಪ್ರದೇಶಕ್ಕೆ ಮೀಸಲಾದ ಹಣವನ್ನು ದುರುಪಯೋಗ ಮಾಡಿದೆ. ಆದ್ದರಿಂದ, ಅಕ್ರಮ ಎಸಗಿದವರ ಬಗ್ಗೆ ಮೃದು ಧೋರಣೆ ತೋರದೆ ಸೂಕ್ತ ನಿರ್ದೇಶನ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯ ಮೊರೆ ಹೋಗಲಾಗುವುದು ಎಂದು ಸಂಘಟನೆಯು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net