ಸಚಿವ ಸುಧಾಕರ್ ವಿರುದ್ಧ ಶಾಸಕ ರೆಡ್ಡಿ ಕಿಡಿ

17092022 j somashekhar reddy
Published on

ಬಳ್ಳಾರಿ: ವಿಮ್ಸ್‌ನಲ್ಲಿ ರೋಗಿಗಳ ಸಾವಿಗೆ ನಿರ್ದೇಶಕ ಟಿ.ಗಂಗಾಧರಗೌಡ ನಿರ್ಲಕ್ಷ್ಯ ಕಾರಣ ಎಂದು ನಗರ ಶಾಸಕ ಸೋಮಶೇಖರರೆಡ್ಡಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅವರನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಬೇಡಿ ಎಂದು ಸಚಿವ ಸುಧಾಕರ್‌ಗೆ ಅನೇಕ ಬಾರಿ ಹೇಳಿದ್ದೆವು. ಆದರೂ, ಸುಧಾಕರ್ ನಮ್ಮ ಮಾತು ಕೇಳಲಿಲ್ಲ. ನಮ್ಮ ಮಾತನ್ನು ಸುಧಾಕರ್ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ ಎಂದು ಅಸಮಾಧಾನ ಹೊರ ಹಾಕಿದರು. ವಿಮ್ಸ್‌ಗೆ ಪ್ರತಿದಿನ ಸಾವಿರಾರು ಜನ ಬರುತ್ತಾರೆ. ನಿರ್ದೇಕರಾದವರು ಪ್ರತಿದಿನ ರೌಂಡ್ಸ್ ಹೋಗಬೇಕು. ಗಂಗಾಧರಗೌಡಗೆ ಅನುಭವ ಇಲ್ಲ. ಇವರ ಬದಲಾವಣೆ ಮಾಡುವಂತೆ ಸಿಎಂಗೆ ಕೇಳುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net