

ಬಳ್ಳಾರಿ: ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಲ್ಲ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಅಕಾಂಕ್ಷಿ ಅನ್ನೋದಕ್ಕಿಂತ ಕಸಾಪುರ ಆಂಜನೇಯ ಸ್ವಾಮಿ ಅನುಗ್ರಹ ಮಾಡಿದರೆ ಸಚಿವನಾಗುತ್ತೇನೆ. ನಾನು ಶ್ರಮಜೀವಿ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ನನ್ನನ್ನು ನಂಬಿ ಹೈಕಮಾಂಡ್ ಮನಸ್ಸು ಮಾಡಿ ಸಚಿವ ಸ್ಥಾನ ಕೊಟ್ಟರೆ ನಿರ್ವಹಿಸುವ ಶಕ್ತಿ ಇದೆ ಎಂದರು.
ಬಳ್ಳಾರಿಯನ್ನು ಸ್ಮಾರ್ಟ್ ಸಿಟಿ ಮಾಡಲಾಗುವುದು ಎಂದು ಸಚಿವ ಬೈರತಿ ಬಸವರಾಜ ಮಾತು ಕೊಟ್ಡಿದ್ದಾರೆ. ಅಲ್ಲದೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಬಳ್ಳಾರಿ ನಗರದ ಒಳಚರಂಡಿ ವ್ಯವಸ್ಥೆ ಸರಿಪಡಿಸಲು 220 ಕೋಟಿ ರೂ. ಅನುದಾನ ಸಚಿವ ಬೈರತಿ ಬಸವರಾಜ ನೀಡಲು ಒಪ್ಪಿದ್ದಾರೆ. ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.