

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ
ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಮಾತೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯಗೆ ಹೇಳೋಕೆ ಯಾವುದೇ ವಿಷಯವಿಲ್ಲ. ಇಂತಹ ದಿನಕ್ಕೂಂದು ಕಥೆ ಕಟ್ಟುತ್ತಾರೆ ಎಂದು ಗಣಿ-ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಬಿ.ಆಚಾರ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತಾ ಷಾ ಆಗಮಿಸುತ್ತಿಲ್ಲ. ರಾಜ್ಯದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಹೇಗೆ ಇದ್ದಾರೋ ಅದರಂತೆ ರಾಜ್ಯದಲ್ಲಿ ಸಿಎಂ ಆಗಿ ಬಸವರಾಜ ಬೊಮ್ಮಾಯಿಯೂ ಇರುತ್ತಾರೆ. ವಿಧಾನಸಭಾ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಸಿದ್ದರಾಮಯ್ಯ ಮಾತಲ್ಲಿ ಅರ್ಥವಿಲ್ಲ ಎಂದರು.
ಪಿಎಸ್‌ಐ ಅಕ್ರಮ ನೇಮಕಾತಿ ಕುರಿತಾಗಿ ನನ್ನ ಹತ್ತಿರ ಎಲ್ಲ ಮಾಹಿತಿ ಇದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಎರಡು ಬಾರಿ ಸಿಐಡಿ ನೋಟಿಸ್ ನೀಡಿದರೂ ಮಾಹಿತಿ ನೀಡಲು ಏಕೆ ಹಾಜರಾಗುತ್ತಿಲ್ಲ ? ಕಾಂಗ್ರೆಸ್‌ನವರಿಗೆ ಎಷ್ಟು ಬದ್ಧತೆಯಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಅ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಚಿಕಿತ್ಸೆ ನಿಡುತ್ತಿದೆ. ದಾಳಿ ನಡೆಸಿದ ಆರೋಪಿಗೆ ಶಿಕ್ಷೆ ಆಗಬೇಕು, ಕೇವಲ ಕಾನೂನಾತ್ಮಕವಾಗಿ ಶಿಕ್ಷೆ ಸಲ್ಲದು. ಕಠಿಣ ಶಿಕ್ಷೆ ನೀಡಬೇಕೆಂದು ನ್ಯಾಯಾಲಯಕ್ಕೆ ಒತ್ತಾಯ ಮಾಡುತ್ತವೆ ಎಂದರು.