ಬಳ್ಳಾರಿ ಮಹಾನಗರ ಪಾಲಿಕೆಗೆ ಮತದಾನ ನಾಳೆ: ಕಣದಲ್ಲಿದ್ದಾರೆ 187 ಅಭ್ಯರ್ಥಿಗಳು

Ballari Metropolitan
ಬಳ್ಳಾರಿ ಮಹಾನಗರ ಪಾಲಿಕೆ.
Published on

ಬಳ್ಳಾರಿ: ಕರೊನಾತಂಕ ಮಧ್ಯೆಯೂ ಕುತೂಹಲ ಕೆರಳಿಸಿರುವ ಮಹಾನಗರ ಪಾಲಿಕೆಯ 39ವಾರ್ಡ್‌ಗಳಿಗೆ ಮಂಗಳವಾರ (ಏ.27) ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ವಿವಿಧ ಪಕ್ಷಗಳು ಮತ್ತು ಪಕ್ಷೇತರರು ಸೇರಿ 187 ಉಮೇದುವಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮತದಾನಕ್ಕಾಗಿ 338 ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗಳಲ್ಲಿ ನಾನಾ ಸೌಕರ್ಯಗಳನ್ನು ಚುನಾವಣಾ ಆಯೋಗದ ನಿಯವಾನುಸಾರ ಜಿಲ್ಲಾಡಳಿತ ಕೈಗೊಂಡಿದೆ. 1,66,298 ಪುರುಷರು, 1,74,538 ಮಹಿಳೆಯರು ಹಾಗೂ 36 ಇತರೆ ಸೇರಿ ಒಟ್ಟು 3,40,872 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಪಲ್ಸ್ ಆಕ್ಸಿಮೀಟರ್ ಪರಿಶೀಲಿಸುವುದಕ್ಕಾಗಿ ಅಂಗನವಾಡಿ/ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. 2,228 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ ಹೆಚ್ಚುವರಿ 200 ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ. ಪಾಲಿಕೆಯ 500 ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ಸಹಕರಿಸಲಿದ್ದಾರೆ. ಪ್ರತಿ ಮತಗಟ್ಟೆಗೂ 20 ವಾಸ್ಕ್, 6 ಸಣ್ಣ ಸ್ಯಾನಿಟೈಸರ್ ಬಾಟಲ್, 6 ಫೇಸ್‌ಶೀಲ್ಡ್ ಹಾಗೂ 6 ಜತೆ ಗ್ಲೌಸ್‌ಗಳನ್ನು ಮಸ್ಟರಿಂಗ್ ಆಗಮಿಸಿದ ಚುನಾವಣಾ ಸಿಬ್ಬಂದಿಗೆ ಒದಗಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಸ್ಟರಿಂಗ್ ಕಾರ್ಯದಲ್ಲಿ ಚುನಾವಣೆಗೆ ನಿಯೋಜಿತರಾದ ಸಿಬ್ಬಂದಿ, ಸ್ಥಳದಲ್ಲಿ ಕೋವಿಡ್ ತಪಾಸಣೆ ವಾಡಿಸಿಕೊಂಡು ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ಮತಗಟ್ಟೆಗಳತ್ತ ತೆರಳಿದರು.

14 ಸಿಬ್ಬಂದಿಗೆ ಸೋಂಕು
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಮಸ್ಟರಿಂಗ್ ಕಾರ್ಯದ ವೇಳೆ 14 ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಮೊದಲು ಎಲ್ಲ ಸಿಬ್ಬಂದಿಗೆ ಥರ್ವಾ ಮೀಟರ್ ಮೂಲಕ ಚೆಕ್ ವಾಡಲಾಗಿತ್ತು. ಸ್ವಲ್ಪ ಅನುಮಾನ ಬಂದ ಕೂಡಲೇ ಕರೊನಾ ಟೆಸ್ಟ್ ಮಾಡಿದ್ದರಿಂದ ಸೋಂಕು ಪತ್ತೆಯಾಗಿದೆ. ಇದು ಚುನಾವಣೆ ಸಿಬ್ಬಂದಿಯನ್ನೇ ಬೆಚ್ಚಿ ಬೀಳಿಸಿದೆ. ಈ ಸಿಬ್ಬಂದಿ, ಉಳಿದವರೊಂದಿಗೆ ಓಡಾಡಿರುವುದರಿಂದ ಆತಂಕ ಮ6ನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net