

ಶ್ರೀಕಾಂತ ಅಕ್ಕಿ ಬಳ್ಳಾರಿ
ಬಳ್ಳಾರಿ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದರೂ ಅಧಿಕಾರ ಅನುಭವಿಸುವ ಭಾಗ್ಯ ಸಿಕ್ಕಿಲ್ಲ.
2013ರಲ್ಲಿಯೂ ಮೇಯರ್ ಮತ್ತು ಉಪ ಮೇಯರ್ ಮೀಸಲು ಪ್ರಶ್ನಿಸಿ ಕೆಲವರು ಕೋರ್ಟ್‌ಗೆ ತೆರಳಿದ್ದರಿಂದ 2 ವರ್ಷದ ಬಳಿಕ ‘ಕೈ’ ಅಧಿಕಾರದ ಗದ್ದುಗೆ ಏರಿತ್ತು. ಈಗ ಮತ್ತದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಈ ಬಾರಿ ಮೀಸಲು ವಿವಾದದಿಂದಲ್ಲ. ಬದಲಿಗೆ ಸರ್ಕಾರ, ಕರೊನಾ ಕಾರಣದಿಂದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನು 6 ತಿಂಗಳವರೆಗೆ ಮುಂದೂಡಿರುವುದು. ಇದನ್ನು ವಿರೋಧಿಸಿ ನಗರ ಕಾಂಗ್ರೆಸ್ ಸಮಿತಿ ಧಾರವಾಡ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿದೆ.
ಒಂದು ವೇಳೆ ದಾವೆ ಹೂಡುವುದರೊಳಗಾಗಿ ಸರ್ಕಾರ, ಆದೇಶ ಹಿಂಪಡೆದು ಚುನಾವಣೆಗೆ ದಿನಾಂಕ ೋಷಣೆ ವಾಡಿದರೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಸರ್ಕಾರವು ಪ್ರತಿವಾದಿಯಾಗಿ ಸೂಕ್ತ ಕಾರಣ ನೀಡಿ, ಹೈಕೋರ್ಟ್‌ನಲ್ಲಿ ವಾದಿಸಲು ಆರಂಭಿಸಿದರೆ ಕೊನೆಗೆ ಕಾಂಗ್ರೆಸ್‌ಗೆ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚು. ಹೇಗಿದ್ದರೂ ಪಾಲಿಕೆಯಲ್ಲಿ ಸದ್ಯ ಆಡಳಿತ ಬಿಜೆಪಿ ಪರವಾಗಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಬದಲು ಕಾಂಗ್ರೆಸ್‌ಗೆ ಅಧಿಕಾರ ಸಿಗದಂತೆ ವಾಡುವ ಪ್ರಯತ್ನವೂ ತೆರೆಮರೆಯಲ್ಲಿ ನಡೆಯುತ್ತಿದೆ.
39 ವಾರ್ಡ್‌ಗಳ ಪೈಕಿ ಯಾವುದೇ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು 20 ಸ್ಥಾನಗಳ ಅವಶ್ಯಕತೆಯಿದೆ. ಕಾಂಗ್ರೆಸ್ 25 ಸ್ಥಾನ ಗೆದ್ದಿರುವುದರಿಂದ ಸಹಜವಾಗಿಯೇ ಅಧಿಕಾರ ಹಿಡಿಯಲಿದೆ. ಆದರೆ, ಇದನ್ನು ತಡೆಯಲು ಸ್ಥಳೀಯ ಬಿಜೆಪಿ ಮುಖಂಡರು ಒಳಗೊಳಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿಯೇ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮೂಂದೂಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಬಿಜೆಪಿಯ 9 ಸದಸ್ಯರಿದ್ದಾರೆ. ಗೆದ್ದಿರುವ ಐವರು ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಇನ್ನುಳಿದ ಇಬ್ಬರ ಜತೆ ಆಪರೇಷನ್ ಕಮಲ ಮೂಲಕ 9 ಕಾಂಗ್ರೆಸ್ ಸದಸ್ಯರನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪ್ಲ್ಯಾನ್ ಕೂಡ ಬಿಜೆಪಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್‌ನಿಂದ ಗೆದ್ದಿರುವ ಸದಸ್ಯರ ಪೈಕಿ 9 ಸದಸ್ಯರು ಮನಸ್ಸು ಬದಲಿಸಿದರೆ ವಾತ್ರ ಇದು ಸಾಧ್ಯ.
ಎರಡೂ ಪಕ್ಷಗಳಿಗೆ ಚುಕ್ಕಾಣಿ ಹಿಡಿವ ಉಮೇದು
ರಾಜ್ಯದಲ್ಲಿ ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ರೆಡ್ಡಿ ಸಹೋದರರು. ಹೀಗಾಗಿ ಶಾಸಕ ಸೋಮಶೇಖರ ರೆಡ್ಡಿ ಆಪರೇಷನ್ ಕಮಲ ವಾಡಿದರೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಆದರೆ, ಮಗನ ಸೋಲಿನಿಂದ ಬೇಸರಗೊಂಡಿರುವ ರೆಡ್ಡಿ, ವಿಚಲಿತರಾಗಿದ್ದಾರೆ. ಆದರೂ ತೆರೆಮರೆಯಲ್ಲಿ ಪ್ರಯತ್ನ ನಡೆಸಿ ಕೆಲ ಕಾಂಗ್ರೆಸ್ ಸದಸ್ಯರನ್ನು ಗುಟ್ಟಾಗಿ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಇತ್ತೀಚೆಗೆ ನಗರದ ದೇವಸ್ಥಾನವೊಂದರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಅದರಲ್ಲೂ ಮೇಯರ್ ಆಕಾಂಕ್ಷಿಯಾಗಿರುವ ಸದಸ್ಯರೊಬ್ಬರಿಗೆ ‘ನೀನು ಮೇಯರ್ ಆದರೇ ನಮ್ಮ ಅಭ್ಯಂತರವಿಲ್ಲ’ ಎಂದು ಹೇಳಿರುವ ರೆಡ್ಡಿ ಮಾತು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ, ಅಧಿಕಾರ ಪಡೆಯುವ ಉಮೇದಿನಲ್ಲಿ ಎರಡೂ ಪಕ್ಷಗಳಿವೆ. ಸುಲಭವಾಗಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಹಠದಲ್ಲಿ ಕಾಂಗ್ರೆಸ್ ಇದ್ದರೆ, ಹೇಗಾದರೂ ವಾಡಿ ಕೈ ನಾಗಾಲೋಟಕ್ಕೆ ಬ್ರೇಕ್ ಹಾಕಬೇಕೆಂಬ ತುಡಿತದಲ್ಲಿ ಬಿಜೆಪಿಯಿದೆ. ಹೀಗಾಗಿಯೇ ಬೇಗ ಅಧಿಕಾರ ದಕ್ಕಿಸಿಕೊಳ್ಳಬೇಕೆಂದು ಕಾಂಗ್ರೆಸ್ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.
ಕರೊನಾ ತೀವ್ರತೆ ಕಡಿಮೆಯಾದರೂ ಮೇಯರ್ ಮತ್ತು ಉಪಮೇಯರ್ ಆಯ್ಕೆ ಮುಂದೂಡಿರುವ ಸರ್ಕಾರದ ಕ್ರಮ ಸರಿಯಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ, ಧಾರವಾಡ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಪಕ್ಷದಿಂದ ಚಿಂತನೆ ನಡೆಸಲಾಗಿದೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳಲಿದ್ದೇವೆ.| ಮೊಹಮ್ಮದ್ ರಫೀಕ್ ಅಧ್ಯಕ್ಷ, ನಗರ ಕಾಂಗ್ರೆಸ್ ಸಮಿತಿ, ಬಳ್ಳಾರಿ