

ಬಳ್ಳಾರಿ: ಎಂಇಎಸ್ ನಿಷೇಧಿಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ವೈಯಕ್ತಿಕ ಬೆಂಬಲವಿದೆ ಎಂದು ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಡದ್ರೋಹಿಗಳ ವಿರುದ್ಧದ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ. ಆದರೆ, ಎಂಇಎಸ್ ದಿಢೀರನೆ ನಿಷೇಧ ಮಾಡಲು ಬರುವುದಿಲ್ಲ. ಕೆಲ ಕಾನೂನು ತೊಡಕುಗಳು ಇರುತ್ತವೆ.ಅವರು ಕೋರ್ಟ್‌ಗೆ ಹೋಗುವ ಸಾಧ್ಯತೆ ಇರುತ್ತದೆ. ಇದೆಲ್ಲದರ ನಡುವೆಯೂ ಎಂಇಎಸ್ ನಿಷೇಧದ ಕುರಿತು ಸಿಎಂ ಖಚಿತ ಭರವಸೆ ನೀಡಿದ್ದಾರೆ ಎಂದು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ವಿದೇಶಕ್ಕೆ ಹೋಗುವುದು ಊಹಾಪೋಹವಷ್ಟೆ, ರಾಜ್ಯ ಸರ್ಕಾರದಲ್ಲಿ ಯಾವುದೇ ಬದಲಾವಣೆ ನಡೆಯುವುದಿಲ್ಲ. ಜನವರಿಯಲ್ಲಿ ಮಹತ್ವಾಕಾಂಕ್ಷೆ ಯೋಜನೆಯೊಂದನ್ನು ಸಿಎಂ ೋಷಣೆ ಮಾಡಲಿದ್ದಾರೆ.ದೇವರ ಅನುಗ್ರಹ ಇದ್ದರೆ ನಾನು ಮಂತ್ರಿಯಾಗುತ್ತೇನೆ. ಎಂಎಲ್ಸಿ ಚುನಾವಣೆ ಗೆಲುವಿಗೆ ಶ್ರಮಿಸಿದ್ದರಿಂದ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.