ಬಳ್ಳಾರಿ ; ಜೀವ ಪರವಾದ ಜನಮುಖಿ ಸಾಹಿತ್ಯವು ಚಿರವಾಗಿ ಉಳಿಯಲಿ ಎಂದು ವೀ.ವಿ.ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಟೇಲ್ ಅಭಿಪ್ರಾಯಪಟ್ಟರು.
ನಗರದ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಸಾಪದಿಂದ ಶುಕ್ರವಾರ ನಡೆದ ಯುವಕವಿ ಸಂತೋಷ ಯಕ್ಕುಂಡಿ ಅವರ ಪ್ರಥಮ ಕೃತಿ ಬೆಳವಡಿಯ ಬೆಳಕು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಸೃಜನಶೀಲ ವ್ಯಕ್ತಿತ್ವವನ್ನು ರೂಡಿಸಿಕೊಂಡಿರುವ ಸಂತೋಷರವರು ಈ ಕವನ ಸಂಕಲನದಲ್ಲಿ ವೈವಿಧ್ಯಮಯ ಕವನಗಳನ್ನು ರಚಿಸಿದ್ದಾರೆ ಎಂದರು.
ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿ ನರಸಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಎಲ್ಲರೂ ಗ್ರಂಥಾಲಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.