ಪ್ರತಿಯೊಬ್ಬರ ಮನ ಪರಿವರ್ತನೆ ಆಗಲಿ

Published on

ಬಳ್ಳಾರಿ : ಸಾಂಸ್ಕೃತಿಕ, ಸುಗಮ ಸಂಗೀತ ಹಾಗೂ ನಾಟಕಗಳು ಖೈದಿಗಳ ಮನ ಪರಿವರ್ತನೆ ಮಾಡಲು ಸಹಾಯ ಮಾಡುತ್ತವೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಮನಃ ಪರಿವರ್ತನಾ ಮನರಂಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ನಿರಂತರ ತಿದ್ದುವ ಕಾರ್ಯ ನಾಟಕಗಳು, ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಮಾಡುತ್ತಿವೆ. ಇದರಿಂದ ಮನುಷ್ಯನಲ್ಲಿ ಹೊಸ ಚೈತನ್ಯ ಮೂಡಿ ಮನಸ್ಸು ಪರಿವರ್ತನೆ ಆಗುತ್ತದೆ. ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ಜಿ. ಉಮ್ಮಿ ತಸ್ಮಿಯಾ ಮಾತನಾಡಿ, ಬಂಧಿಗಳಿಗಾಗಿ ಇಂತಹ ಕಾರ್ಯಕ್ರಮಗಳು ಮನಪರಿವರ್ತನೆ ಜತೆಗೆ ಮನರಂಜನೆ ನೀಡುತ್ತದೆ. ಖೈದಿಗಳು ಸಹ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಂಡು ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಶಂಕರಬಂಡೆಯ ಯಲ್ಲನಗೌಡ ತಂಡದಿಂದ ನಾಟಕ ಪ್ರದರ್ಶನ ಮತ್ತು ಸುಗಮ ಸಂಗೀತ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net