ರಕ್ತದಾನದ ಮೂಲಕ ಮಾದರಿಯಾಗಿ

Ballari VSKVV Blood donate camp
ಬಳ್ಳಾರಿಯ ವಿಎಸ್‌ಕೆವಿವಿಯಲ್ಲಿ ರಕ್ತದಾನಿಗೆ ಕುಲಪತಿ ಸಿದ್ದು ಪಿ.ಅಲಗೂರ ಪ್ರಮಾಣಪತ್ರ ವಿತರಿಸಿದರು.
Published on

ಬಳ್ಳಾರಿ: ರಕ್ತದಾನ ಮಹಾದಾನ. ಮನುಷ್ಯ ಎಲ್ಲ ಸಾಧನೆ ಮಾಡಿದ್ದರು ನೈಸರ್ಗಿಕ ರಕ್ತದಂತೆ ಕೃತಕ ತಯಾರಿಕೆ ಸಾದ್ಯವಾಗಿಲ್ಲ. ಒಬ್ಬರ ರಕ್ತದಿಂದ ಮೂವರ ಪ್ರಾಣ ಉಳಿಸಬಹುದು ಎಂದು ವಿಎಸ್‌ಕೆವಿವಿ ಕುಲಪತಿ ಸಿದ್ದು ಪಿ.ಅಲಗೂರ ಹೇಳಿದರು.

ವಿವಿಯಲ್ಲಿ ಯುವ ರೆಡ್ ಕ್ರಾಸ್ ಘಟಕ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಯುವ ರೆಡ್ ಕ್ರಾಸ್ ಘಟಕದ ನೂಡಲ್ ಅಧಿಕಾರಿ ಡಾ.ಶಶಿಕಾಂತ್ ಮಜಗಿ ಮಾತನಾಡಿದರು. 35 ಜನ ರಕ್ತದಾನ ಮಾಡಿದರು. ಕುಲಸಚಿವ ಎಸ್.ಸಿ.ಪಾಟೀಲ್, ರೆಡ್ ಕ್ರಾಸ್ ಸಭಾಪತಿ ಡಾ.ಮಹಿಪಾಲ್‌ರೆಡ್ಡಿ, ಕಾರ್ಯದರ್ಶಿ ಎಂ.ಎ.ಶಕೀಬ್, ಪ್ರಮುಖರಾದ ಡಾ.ಮೆಘರಾಜ, ವಿಜಯಕುಮಾರ ಮಲಶೆಟ್ಟಿ, ಡಾ.ದಿನೇಶ.ಪಿ, ಡಾ.ಕೆ.ವಿ.ಪ್ರಸಾದ, ಡಾ.ಗೌರಿ ಮಾನಸ್, ಡಾ.ಅರ್ಚನ್, ಡಾ.ಹನುಮೇಶ, ಡಾ.ನಾಗಭೂಷಣ್ ಸಿ, ಎಂ. ಸ್ನೇಹ ಸುಮಾ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net