

ಬಳ್ಳಾರಿ: ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ನಗರದ ಅಹಂಬಾವಿ ಪ್ರದೇಶದಲ್ಲಿ ಶನಿವಾರ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಶ್ರಮದಾನ ಮಾಡಿದರು.
ಮಹಾತ್ಮ ಗಾಂಧಿ ಶಾಂತಿಧೂತರಾಗಿದ್ದು, ಅವರ ಜೀವನದುದ್ದಕ್ಕೂ ಅಹಿಂಸೆಯ ಮಾರ್ಗದೊಂದಿಗೆ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಒತ್ತು ನೀಡಿ, ಸ್ವತಃ ಅಳವಡಿಸಿಕೊಂಡಿದ್ದಾರೆ. ಗ್ರಾಮಸ್ವರಾಜ್, ಸ್ವಚ್ಛ ಭಾರತವು ಗಾಂಧೀಜಿ ಕನಸಾಗಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ಗಾಂಧಿ ತತ್ವಾದರ್ಶನಗಳನ್ನು ಯುವಜನತೆ ಪಾಲಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.