ಬಜೆಟ್ ಕುರಿತು ಲೌಡ್ ಸ್ಪೀಕರ್

Published on

ಬಳ್ಳಾರಿ : ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಪಾಲಿಗೆ ಇದು ದಾಖಲೆಯ ಎಂಟನೆ ಬಜೆಟ್‌ಯಾಗಿದ್ದು, ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳು ಘೋಷಿಸದೆ ಜನರಿಗೆ ಅಸಮಾಧಾನ ಮೂಡಿಸಿದ್ದಾರೆ. ಹನ್ನೇರೆಡು ಲಕ್ಷ ರೂ. ದವರೆಗೆ ತೆರಿಗೆ ವಿನಾಯಿತಿಸಿ ಮುಂದಿನ ವಾರದಿಂದನೇ ಹೊಸ ತೆರಿಗೆ ನೀತಿ ಪ್ರಕಟಿಸುವ ಮೂಲಕ ವೈಯಕ್ತಿಕ ವೇತನದಾರರ ಮನ ಗೆದ್ದಿದ್ದಾರೆ. ಮೊಬೈಲ್, ಟಿವಿ, ಎಲೆಕ್ಟ್ರಿಕಲ್ ವಸ್ತುಗಳ, ಚರ್ಮ ಉತ್ಪನ್ನದ ವಸ್ತುಗಳ ಹಾಗೂ ಕ್ಯಾನ್ಸರ್ ರೋಗ ಔಷಧಗಳು ದರ ಇಳಿಕೆಗೊಳಿಸಿ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿದ್ದಾರೆ. ಪಟ್ಟಣ, ನಗರಾಭಿವೃದ್ದಿಗೆ ಅನುದಾನ ಹಾಗೂ ಬೀದಿ ವ್ಯಾಪಾರಸ್ಥರಿಗೆ ಕ್ರೆಡಿಟ್ ಕಾರ್ಡ್ ಮತ್ತು ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಸೆಂಟರ್ ಆರಂಭಿಸಲಾಗುವುದು ಎಂಬುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಬಜೆಟ್ ಬಗ್ಗೆ ವಿಜಯವಾಣಿಯ ಪತ್ರಿಕೆಯ ಲೌಡ್ ಸ್ಪೀಕರ್‌ನಲ್ಲಿ ಜಿಲ್ಲೆಯ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

===

ಆಶಾದಾಯಕ ಬಜೆಟ್ ಸ್ವಾಗತಾರ್ಹ

ಆಶಾದಾಯಕ ಬಜೆಟ್ ಆಗಿದೆ. ಸ್ಟಾರ್ಟಪ್‌ಗಳಿಗೆ, ಎಂಎಸ್‌ಎಂಇಗಳಿಗೆ ಉತ್ತೇಜನಕವಾಗಿದೆ. ಆತ್ಮನಿರ್ಭರದ ಅಡಿಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಮಧ್ಯಮವರ್ಗದ ಬೇಡಿಕೆಯಂತೆ ವೈಯಕ್ತಿಕ ಆದಾಯ ತೆರಿಗೆಯ ವಿನಾಯಿತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಹತ್ತಿ ಉತ್ಪಾದನೆಗೆ ಕಾಟನ್ ಮಿಷನ್ ಘೋಷಣೆ ಮಾಡಿರುವುದು ಸ್ವಾಗತಾರ್ಹ.

- ಯಶವಂತರಾಜ್ ನಾಗಿರೆಡ್ಡಿ, ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ. ಬಳ್ಳಾರಿ

===

ಅಭಿವೃದ್ಧಿಯ ದಿಕ್ಸೂಚಿ

ಆರೋಗ್ಯ, ಪ್ರವಾಸೋದ್ಯಮ, ಉದ್ಯೋಗಸೃಷ್ಠಿ, ಮಧ್ಯಮವರ್ಗದವರ ಆರ್ಥಿಕ ಸ್ವಾವಲಂಭನೆಗೆ ಹೆಚ್ಚಿನ ಆದ್ಯತೆ ನೀಡಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಸರ್ವಾಂಗೀಣವಾಗಿ ಸ್ವಾವಲಂಭನೆಗೊಳಿಸಿ ಅಭಿವೃದ್ಧಿಗೊಳಿಸಲು ಮಹತ್ವ ನೀಡಿದ್ದಾರೆ. ಕೃಷಿ, ಕೈಗಾರಿಕೆ, ಗಣಿಗಾರಿಕೆ, ಇಂಧನ ಕ್ಷೇತ್ರಗಳನ್ನು ವಿಶೇಷವಾಗಿ ಪರಿಗಣಿಸಿ ಬಜೆಟ್ ಮಂಡಿಸಲಾಗಿದೆ. ದೇಶದ ಭವಿಷ್ಯದ ಅಭಿವೃದ್ಧಿಯ ದಿಕ್ಸೂಚಿ ಆಗಲಿದೆ.

- ವೈ.ಎಂ. ಸತೀಶ್, ವಿಧಾನಪರಿಷತ್ ಸದಸ್ಯ, ಬಳ್ಳಾರಿ

===

ರೈತ ವಿರೋಧಿ ಬಜೆಟ್

ಕೇಂದ್ರ ಸರ್ಕಾರ ಮತ್ತೋಮ್ಮೆ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ. ರೈತ, ಯುವಕರ ಹಾಗೂ ಮಧ್ಯಮ ವರ್ಗದ ವಿರೋಧಿ ಬಜೆಟ್‌ಯಾಗಿದೆ.

- ವೆಂಕಟೇಶ್ ಹೆಗಡೆ, ವಕೀಲ, ಬಳ್ಳಾರಿ.

====

ವೈಯಕ್ತಿಕ ಪಾವತಿದಾರರಿಗೆ ಬಂಪರ್

ಕೇಂದ್ರ ಮುಂಗಡ ಪತ್ರದ ಅನ್ವಯ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಬಿಹಾರಕ್ಕೆ ಹೊತ್ತು ನೀಡಿ ಕರ್ನಾಟಕವನ್ನು ಒಳಗೊಂಡಂತೆ, ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶ ಹಾಗೂ ಇತರೆ ರಾಜ್ಯಗಳಿಗೆ ಯಾವುದೇ ಹೊಸ ಯೋಜನೆ ನೀಡದಿರುವುದು ಸ್ವೀಕಾರಾರ್ಹವಲ್ಲ.

- ಸಿರಿಗೇರಿ ಪನ್ನರಾಜ್, ಸಿಎ, ಬಳ್ಳಾರಿ

====

ಪ್ರವಾಸಿ ತಾಣಗಳಿಗೆ ಸೌಲಭ್ಯ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 6 ಲಕ್ಷ ಕೋಟಿ ರೂ. ಬಜೆಟ್ ಮದ್ಯಮ ವರ್ಗದವರ ಬಜೆಟ್ ಆಗಿದೆ. ಪ್ರವಾಸೋದ್ಯಮ ವಲಯಕ್ಕೆ 50 ಪ್ರವಾಸಿ ತಾಣಗಳನ್ನು ಗುರುತಿಸಿ ಸುವ್ಯವಸ್ಥೆ ಸೌಲಭ್ಯಗಳನ್ನು ಒದಗಿಸಲಾಗಿದೆ.

- ಆಶ್ವಿನ ಕೋತಂಬ್ರಿ, ಅಧ್ಯಕ್ಷ, ವಾಣಿಜ್ಯ ಹಾಗೂ ಕೈಗಾರಿಕಾ ಸಂಘ, ಹೊಸಪೇಟೆ

===

ಮೂಲ ಸೌಕರ್ಯಗಳಿಗೆ ಒತ್ತು

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನ ಸಾಮಾನ್ಯರಿಗೆ ಹೆಚ್ಚಿನ ಉಪಯೋಗ ಆಗಲಿದೆ. ತೆರಿಗೆ ಕಡಿಮೆ ಮಾಡಿದೆ. ಕೃಷಿ ಹಾಗೂ

ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದೆ. ಯುವಜನರಿಗೆ ಹಲವು ಯೋಜನೆಗಳನ್ನು ಮಂಡಿಸಿದ್ದಾರೆ. ಸಾಲ ಸೌಲಭ್ಯ, ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

- ಬಿ.ಎಸ್.ಜಂಬಯ್ಯ ನಾಯಕ, ವಾಲ್ಮೀಕಿ ಪೀಠದ ಧರ್ಮದರ್ಶಿ, ಹೊಸಪೇಟೆ

===

ಕೃಷಿಕರಿಗೆ ಉತ್ತೇಜನ

ಕೇಂದ್ರ ಬಜೆಟ್‌ಗ್ರಾಮೀಣ ಯುವ ಕೃಷಿಕರಿಗೆ ಮತ್ತು ಖಾಸಗಿ ಉದ್ಯಮಿಗಳಿಗೆ ನವೋದ್ಯಮಗಳನ್ನು ಸೃಷ್ಟಿಸಿಕೊಳ್ಳಲು ಉತ್ತೇಜನ ನೀಡಿದೆ. ಮೀನುಗಾರಿಗೆ ಮತ್ತು ರೈತರಿಗೆ ಸುಲಭ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಿದೆ.

- ನಾಗರಾಜ್ ಕೊಂಗನ ಹೊಸೂರು, ಕೃಷಿಕ, ಹರಪನಹಳ್ಳಿ

====

ಯುವಕರಿಗೆ ಉತ್ತೇಜನ

ಆದಾಯ ಪಾವತಿ ತೆರಿಗೆದಾರರಿಗೆ 12 ಲಕ್ಷ ರೂ. ವರೆಗೆ ಪಾವತಿ ಮಾಡದೆ ಇರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಇದರಿಂದ ಹೊಸ ಉದ್ಯಮಗಳನ್ನು ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಯುವ ಜನತೆಯನ್ನು ಉದ್ಯಮಗಳತ್ತ ಹೆಚ್ಚು ಒಲವು ತೋರಿಸಲು ಪ್ರೇರಣೆ ನೀಡುವ ಬಜೆಟ್.

- ವರುಣ್ ಕುಮಾರ್ ಆಚಾರ್, ಉದ್ಯಾಮಿ, ಹರಪನಹಳ್ಳಿ

===

ಹಳೆ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ

ಕೇಂದ್ರ ಸರ್ಕಾರದ ಈ ಬಜೆಟ್‌ನಲ್ಲಿ ಕುಡಿವ ನೀರಿನ ನೈರ್ಮಲ್ಯ, ಬೀದಿ ಬದಿಯ ವ್ಯಾಪಾರಿಗಳಿಗೆ, ಆರೋಗ್ಯ, ಕೃಷಿ ಬಜೆಟ್, ಪೌಷ್ಟಿಕ ಆಹಾರ ಹೆಚ್ಚಿನ ಒತ್ತು ನೀಡಿದ್ದಾರೆ. ನರೇಗಾಯೋಜನೆ ಇನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳಬೇಕಿತ್ತು. ಸಮಸ್ಯೆಗಳು

ಸಾಕಷ್ಟಿವೆ. ಹಲವು ಯೋಜನೆಗಳ ಬಾಕಿಮೊತ್ತ ಜಮಾ ಆಗಿಲ್ಲ. ಹಲವು ಸಮಸ್ಯೆಗಳನ್ನು ಸರ್ಕಾರ ಗಮನಹರಿಸಿಲ್ಲ.

- ಅಕ್ಕಮ್ಮ, ಗ್ರಾಮೀಣ ಕೂಲಿ ಕಾರ್ಮಿಕ ಸಂಘದ, ಸಂಚಾಲಕಿ, ಹಗರಿಬೊಮ್ಮನಹಳ್ಳಿ

=======

=======

ಬಜೆಟ್ ಸರ್ವರಿಗೂ ಸಮಪಾಲು

ರೈತ, ಸಾರ್ವಜನಿಕರಿಗೆ ಹೊರೆಯಾಗದಂತೆ ತೆರಿಗೆ ಕಡಿಮೆ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಬೇಕಿತ್ತು. ದೇಶದ ಮಹಿಳೆ ಹಾಗೂ ಯುವಜನರಿಗೆ ಸ್ವ ಉದ್ಯೋಗಗಳಿಗೆ ಉತ್ತೇಜನ ನೀಡಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಬಜೆಟ್‌ಯಾಗಿದೆ.

- ಐಶ್ವರ್ಯ, ವಿದ್ಯಾರ್ಥಿನಿ, ಪ್ಯಾರಾ ಮೆಡಿಕಲ್, ಸಿರಿಗೇರಿ.

===

ವಿದ್ಯಾರ್ಥಿ ವೇತನ ಹೆಚ್ಚಿಸಿಲ್ಲ

ಬಡವರು, ಮಹಿಳೆಯರು ಹಾಗೂ ಮಧ್ಯಮವರ್ಗದವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. 12 ರೂ. ಲಕ್ಷದ ವರೆಗೂ ತೆರಿಗೆ ವಿನಾಯತಿ ನೀಡಿದ್ದು ಅನುಕೂಲವಾಗಿದೆ. ಹಿಂದುಳಿದ ವರ್ಗದ ಮಹಿಳೆಯರಿಗೆ ಸ್ವಯಂ ಉದ್ಯಮ ಆರಂಭಿಸಲು ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಹೆಚ್ಚಿಸಿದ್ದರೆ ಬಡವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು.

ಪೂಜಾ ಕಡ್ಲಿ, ಬಿ.ಎ.ವಿದ್ಯಾರ್ಥಿನಿ, ಹೂವಿನಹಡಗಲಿ

=====

ರೈತರ ಲಕ್ಷೃವಹಿಸಿಲ್ಲ

36 ಔಷಧಗಳಿಗೆ ರಿಯಾಯಿತಿ ನೀಡಿರುವುದು ಆಯಾ ರೋಗದಿಂದ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಸಂತಸವೇ ಸರಿ. ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಆರಂಭದಿಂದ ಕೇಂದ್ರದ ದೃಢಹೆಜ್ಜೆಯೇ ಸರಿ. ದೇಶದ ಗ್ರಾಮೀಣ ಪ್ರದೇಶದ ರೈತರ ಬಗ್ಗೆ ಲಕ್ಷೃ ವಹಿಸಿಲ್ಲ.

- ಎಚ್. ಚೈತ್ರ ಗಿರೀಶ್, ಕೊಟ್ಟೂರು.

=====

ಕೇಂದ್ರ ಬಜೆಟ್ ದೂರದೃಷ್ಟಿಯಿಲ್ಲದ ಮಹಿಳೆಯರ ಕಣ್ಣೊರೆಸುವ ತಂತ್ರವಾಗಿದೆ. ಬಜೆಟ್ ಗಾತ್ರ ದೊಡ್ಡದಿದ್ದರೆ ಸಾಲದು ಅದರಿಂದ

ಅವಲಂಬಿತರಿಗೆ ಅನುಕೂಲ ಕಲ್ಪಿಸಬೇಕು.

- ಕೊಂಡಾಪುರ ದುರುಗಮ್ಮ, ಸಂಡೂರು.

====

ಸ್ವ ಉದ್ಯೋಗಕ್ಕೆ ಬಲ ನೀಡಿಲ್ಲ

ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವಗರ್ಕ್ಕೆ 12 ಲಕ್ಷ ರೂ. ವರೆಗೂ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಹೋಟೆಲ್ ಉದ್ಯಮ ಗುರಿಯಾಗಿಸಿ ಕಡಿಮೆ ಬಡ್ಡಿದರ ದಲ್ಲಿ ಸಾಲ ಸೌಲಭ್ಯ ಹಾಗೂ ಸ್ವ ಉದ್ಯೋಗಕ್ಕೆ ಆರ್ಥಿಕ ಬಲ ನೀಡಬೇಕಿತ್ತು.

- ಎಚ್.ಎಂ.ಮಲ್ಲಿಕಾರ್ಜುನ, ಹೋಟೆಲ್ ಉದ್ಯಮಿ, ಕೂಡ್ಲಿಗಿ.

=====

ಬಜೆಟ್ ನಿರೀಕ್ಷೆ ಹುಸಿ

ಕೇಂದ್ರ ಬಜೆಟ್ ನಲ್ಲಿ ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಕಾರ್ಮಿಕ ವರ್ಗಕ್ಕೆ ವೇತನ ಹೆಚ್ಚಿಸುವ ನಿರೀಕ್ಷೆ ಹುಸಿಯಾಗಿದೆ, ಇದು ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ತಂತ್ರದ ಬಜೆಟ್ ಬಡ ಕಾರ್ಮಿಕರಿಗೆ ಯಾವುದೇ ಲಾಭದಾಯಕ ವಾಗಿಲ್ಲ.

- ನಾಗಮ್ಮ, ಬಿಸಿಯೂಟ ತಯಾರಕಿ, ಕೂಡ್ಲಿಗಿ.

===

ರಾಜ್ಯಕ್ಕೆ ಯೋಜನೆಗಳು ದೊರೆತಿಲ್ಲ

ಮೇಕಿಂಗ್ ಇಂಡಿಯಾವನ್ನ ಸಮರ್ಥವಾಗಿ ರೂಪಿಸಬೇಕು. ಬಡತನ ನಿರ್ಮೂಲನೆಗೆ ಆದ್ಯತೆ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ತರಕಾರಿ ಹಣ್ಣು ಉತ್ಪಾದನೆ ಲಾಭದಾಯಕಗೊಳಿಸುವ ಯೋಜನೆ ಉತ್ತಮವಾಗಿದೆ. ರಾಜ್ಯಕ್ಕೆ ಹೇಳಿಕೊಳ್ಳುವಂತಹ ಯೋಜನೆಗಳು ದೊರಕಿಲ್ಲ.

- ಎ.ಹನುಮಂತ, ಮೊಬೈಲ್ ವ್ಯಾಪಾರಿ, ಕಂಪ್ಲಿ

====

ಅನುಕೂಲವಾದ ತೆರಿಗೆ ಮಿತಿ ಇಳಿಕೆ

ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್. ಮಹಿಳೆಯರಿಗೆ ಉದ್ಯಮ ಉತ್ತೇಜನ ಸಾಲ ನೀಡಿಕೆ ಸ್ವಾಗತಾರ್ಹವಾಗಿದೆ. ಮೇಕಿಂಗ್ ಇಂಡಿಯಾವನ್ನ ಸಮರ್ಥವಾಗಿ ರೂಪಿಸಬೇಕು. ಗ್ರಾಮೀಣ ಅಭಿವೃದ್ಧಿ ಯೋಜನೆ ಸಾಕಾರಗೊಂಡಲ್ಲಿ ಮಹಿಳೆ, ಯುವಜನತೆ, ರೈತರ ಅಭಿವೃದ್ಧಿ ಸಾಧ್ಯ.

- ಗುರುಬಸಮ್ಮ ಚಂದ್ರಯ್ಯ ಸೊಪ್ಪಿಮಠ, ಶಿಕ್ಷಕಿ, ಕಂಪ್ಲಿ.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net