ಬಳ್ಳಾರಿ : ಕಲಾಮಂದಿರ ಅಭಿವೃದ್ಧಿಗೆ ದಿ.ಭೀಮಪ್ಪ ಚೆಟ್ಟಿ ಸೇವೆ ಅನನ್ಯ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ ಹೇಳಿದರು.
ಇಲ್ಲಿನ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದಿ. ಸಿ.ಭೀಮಪ್ಪ ಚೆಟ್ಟಿ ಅವರ 102ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಹಲವು ಕಲಾವಿದರಿಗೆ ಸಹಾಯ ಮಾಡುವದಲ್ಲದೆ ಕಲಾ ಪ್ರೇಮಿಗಳು ಕೂಡ ಆಗಿದ್ದರು. ಅವರ ಕೆಲಸಗಳು ಮಾದರಿ ತೆಗೆದುಕೊಂಡು ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಬಳಿಕ ಜಿ.ಆರ್.ವೆಂಕಟೇಶಲು ಅವರ ರಚನೆ ಮತ್ತು ನಿರ್ದೇಶನದ ಚೀಕಟಿ ಬ್ರತುಕುಲು ಸಂದೇಶಾತ್ಮಕ ತೆಲುಗು ನಾಟಕವನ್ನು ಪ್ರದರ್ಶನ ನೀಡಲಾಯಿತು.