ಬಳ್ಳಾರಿಯಲ್ಲಿ ಲೋಕ ಅದಾಲತ್: 10,358 ಪ್ರಕರಣಗಳು ರಾಜಿಗೆ ನೋಂದಣಿ

191220 Ballari Loka Adalath
ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಕಾಸಿಂ ಚೂರಿಖಾನ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರು.
Published on

ಬಳ್ಳಾರಿ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಕಾನೂನು ಸೇವೆಗಳ ಪ್ರಾಧಿಕಾರದಿಂದ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 10,358 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಬಂದಿದ್ದವು.

ಬ್ಯಾಂಕಿಗೆ ಸಂಬಂಧಿಸಿದ ವಸೂಲಿ, ಕಾರ್ಮಿಕ ಕಾಯ್ದೆ ಕುರಿತ ವಿವಾದಗಳು, ವಿದ್ಯುಚ್ಛಕ್ತಿ, ಕುಡಿವ ನೀರು, ಕೌಟುಂಬಿಕ ಸಮಸ್ಯೆಗಳು, ಕಂದಾಯ, ಭೂ ವಿವಾದಗಳು, ಅಪಘಾತ, ಚೆಕ್ ಬೌನ್ಸ್, ರಾಜಿಯಾಗಬಹುದಾದ ಐಪಿಸಿ ಹಾಗೂ ಸಿವಿಲ್ ವ್ಯಾಜ್ಯಗಳು ನೋಂದಣಿಯಾಗಿದ್ದವು. ಜಿಲ್ಲಾ ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ನಾಲ್ಕು ಕೋವಿಡ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ನ್ಯಾಯಾಲಯಕ್ಕೆ ಆಗಮಿಸಿದ್ದ ಕಕ್ಷಿದಾರರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿ ವರದಿ ಬಂದ ಬಳಿಕ ವ್ಯಾಜ್ಯಕ್ಕೆ ಸಂಬಂಧಿಸಿದ ನ್ಯಾಯಾಧೀಶರ ಬಳಿ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net