

ಬಳ್ಳಾರಿ: ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆಯಾದ ಬಳಿಕ ಸರ್ಕಾರ ಘೋಷಿಸಿದ ವಾರದಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆಯಿತು.
ನಗರದಲ್ಲಿ ಮೆಡಿಕಲ್ ಶಾಪ್, ತರಕಾರಿ, ಹಾಲು, ಕಿರಾಣಿ ಅಂಗಡಿ, ಪೆಟ್ರೋಲ್ ಬಂಕ್ ಹಾಗೂ ಮಟನ್, ಚಿಕನ್ ಶಾಪ್‌ಗಳು ಮಾತ್ರ ಬೆಳಗ್ಗೆ 7ಗಂಟೆಯಿಂದ ತೆರೆದಿದ್ದು ಬಿಟ್ಟರೆ ಉಳಿದ ಎಲ್ಲ ರೀತಿಯ ಅಂಗಡಿ-ಮುಂಗಟ್ಟುಗಳು ಬಂದಾಗಿದ್ದವು. ಸಾರಿಗೆ ಬಸ್, ಖಾಸಗಿ ವಾಹನಗಳು ರಸ್ತೆಗಿಳಿಯಲಿಲ್ಲ.ಅಲ್ಲದೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರ ಸೇರಿ ವಿವಿಧೆಡೆ ಅನಗತ್ಯವಾಗಿ ಯಾರು ಹೊರಬರದಂತೆ ಮೈಕ್ ಮೂಲಕ ಅನೌನ್ಸ್‌ಮೆಂಟ್ ಮಾಡಿದರು.
ಪ್ರಮುಖ ರಸ್ತೆ, ಸರ್ಕಲ್ಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ದಿನನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. .ಇದರ ಹೊರತಾಗಿ ನಗರದ ವಿವಿಧೆಡೆ ಮಾಂಸ ಮತ್ತು ಮೀನು ಖರೀದಿ ವೇಳೆ ಜನರು ಸಾಮಾಜಿಕ ಅಂತರ ಪಾಲಿಸಲಿಲ್ಲ. ಮಾಸ್ಕ್ ಕೂಡ ಹಾಕದೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದು ಕಂಡು ಬಂತು.