

ಬಳ್ಳಾರಿ: ಲಿಂಗಾಯತ 2ಎ ಮೀಸಲು ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೀಸಲು ಹೋರಾಟವನ್ನು ಜಯಮೃತ್ಯುಂಜಯ ಶ್ರೀಗಳು ಮಾಡುತ್ತಿದ್ದಾರೆ. ಅವರ ಹಿಂದೆ ನಾನಿದ್ದೇನೆ. ಆದರೆ, ಪೂರ್ಣ ಪ್ರಮಾಣದ ಹೋರಾಟವನ್ನು ಸ್ವಾಮೀಜಿ ಮಾಡುತ್ತಾರೆ. ಸಿಎಂ ನಮ್ಮವರೇ ಇದ್ದಾರೆ. 2ಎ ಮೀಸಲು ಕೊಡುವ ವಿಶ್ವಾಸ ಇದೆ. ಸಮುದಾಯದ ಯಾವುದೇ ವ್ಯಕ್ತಿಗೆ ಸಂಕಷ್ಟ ಬಂದಾಗಲೂ ನಾನಿರುವೆ. ಲಿಂಗಾಯತ ಅಷ್ಟೇ ಅಲ್ಲ, ಎಲ್ಲ ಸಮುದಾಯದ ಹೋರಾಟಕ್ಕೂ ನನ್ನ ಬೆಂಬಲವಿದೆ. ನಾನು ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ ಎಂದರು.