ಸಂವಿಧಾನದ ಬಗ್ಗೆ ಸತ್ಯಸಂಗತಿ ತಿಳಿಯಲಿ

Published on

ಬಳ್ಳಾರಿ : ಪ್ರಬುದ್ಧ ನಾಗರೀಕರು ಸಂವಿಧಾನ ಕುರಿತು ಜಾಗೃತಿ ಮೂಡಿಸುವ, ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ತಂದಿದ್ದು, ಅಪಮಾನ ಮಾಡಿದ್ದು ಯಾರು ಎಂಬ ಸತ್ಯ ತಿಳಿಸುವ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ನಗರದ ಬಿಪಿಎಸ್‌ಸಿ ಶಾಲೆಯ ಶರಣ ಸಭಾಂಗಣದಲ್ಲಿ ಸಿಟಿಜೆನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಸಂಘಟನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಮಾಡಿರುವ ಅಪಚಾರವನ್ನು ಜನರಿಗೆ ತಿಳಿಸುವುದು ಮತ್ತು ಸಂವಿಧಾನದ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಜಾಗೃಗತಿ ಮೂಡಿಸಿ ಸಂವಿಧಾನಕ್ಕೆ ಮತ್ತಷ್ಟು ಗೌರವ ಹೆಚ್ಚಿಸುವುದೇ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ರಾಜ್ಯದ ಪ್ರತಿ ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲೂ, ನಗರಗಳಲ್ಲೂ ಸಂವಿಧಾನ ಸನ್ಮಾನ ಅಭಿಯಾನ ಸಮಿತಿಯ ಕಾರ್ಯಕರ್ತರು ಅಭಿಯಾನವನ್ನು ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಬುದ್ಧ ನಾಗರಿಕರು ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಮತ್ತು ಸಂವಿಧಾನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ತಂದಿದ್ದು ಯಾರು, ಅಪಮಾನ ಮಾಡಿದ್ದು ಯಾರು ಎನ್ನುವ ಸತ್ಯ ಸಂಗತಿಗಳನ್ನು ತಿಳಿಸುವ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಮಾತನಾಡಿ, ನಮ್ಮ ಸಂವಿಧಾನ ಪ್ರಪಂಚದ ದೊಡ್ಡ ಸಂವಿಧಾನ ವಾಗಿದೆ. ಇಂತಹ ವಿಶೇಷವಾದ ಸಂವಿಧಾನವನ್ನು ಯಾರೇ ಬಂದರು ಎಷ್ಟೇ ವರ್ಷಗಳು ಆದರು ಬದಲಾವಣೆ ಮಾಡೋದು ಸಾಧ್ಯವಿಲ್ಲ. ಸಂವಿಧಾನದ ಆರ್ಟಿಕಲ್ ಗಳಲ್ಲಿ ಅಮೂಲ್ಯಾಗ್ರ ಬದಲಾವಣೆ ಮಾಡುವದು ಕೂಡ ಸುಲಭದ ಕೆಲಸವಲ್ಲ. ಹಾಗಾಗಿ ವಿದ್ಯಾವಂತರು ಸಂವಿಧಾನ ಬದಲಾವಣೆ ಆಗಲಿದೆ, ಬಿಜೆಪಿಯವರು ಮಾಡುತ್ತಾರೆ ಎನ್ನುವ ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು ಎಂದು ತಿಳಿಸಿದರು.

ನಿಗಮ ಮಂಡಳಿ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ,

ಶಾಲೆಯ ಅಧ್ಯಕ್ಷ ವೆಂಕಟ ಮಹಿಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಜಿಲ್ಲಾ ಸಮಿತಿ ವಿಭಾಗದ ಪ್ರಮುಖರಾದ ದಮ್ಮೂರು ಶೇಖರ್, ಪೂಜಪ್ಪ, ಸುಮಾರೆಡ್ಡಿ, ಕೆ.ಸುಗುಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net