ಸಮಾಜವಾದ ಕ್ರಾಂತಿಯಾಗಲಿ

Published on

ಬಳ್ಳಾರಿ ; ಆರ್ಥಿಕ ಹಾಗೂ ಸಾಮಾಜಿಕವಾಗಿ ಅಸಮಾನತೆಗಳು ತೊಲಗಬೇಕಾದರೆ ಸಮಾಜವಾದಿ ಕ್ರಾಂತಿ ನೆರವೇರಬೇಕು ಎಂಬ ಸತ್ಯ ಶಿವದಾಸ್ ಘೋಷ್ ಮನಗಂಡಿದ್ದರು ಎಂದು ಎಸ್‌ಯುಸಿಐ ಸಂಘಟನೆಯ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹೇಳಿದರು.

ನಗರದ ಎಸ್‌ಯುಸಿಐ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಮಿಕ ವರ್ಗದ ನಾಯಕರಾದ ಫ್ರೆಡರಿಕ್ ಎಂಗೆಲ್ಸ್ ಹಾಗೂ ಕಮ್ಯುನಿಷ್ಟ್ ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಅವರ ಸ್ಮರಣ ದಿನಾಚರಣೆಯಲ್ಲಿ ಮಾತನಾಡಿದರು. ಸಮಾಜವಾದಿ ಕ್ರಾಂತಿ ಆಗಲಿ ಎಂಬ ಉದ್ದೇಶದಿಂದ ಸಿಪಿಐ ಎಂಬ ಪಕ್ಷ ಇದ್ದಾಗಲೂ, ವಿಚಾರ ಹಾಗೂ ಆಚರಣೆಯಲ್ಲಿ ಸಿಪಿಐ ಪಕ್ಷವು ಒಂದು ನೈಜ ಕಮ್ಯುನಿಸ್ಟ್ ಪಕ್ಷದ ಗುಣ ಲಕ್ಷಣ ಹೊಂದಿಲ್ಲವೆಂದು ಘೋಷ್ ಅವರು ವಿಶ್ಲೇಷಣೆಗೊಂಡು ತೋರಿಸಿದವರು ಎಂದರು.

ಇತ್ತೀಚಿನ ದಿನಗಳಲ್ಲಿ ಯಾವುದೇ ಸಿದ್ಧಾಂತ ಬರೀ ಆಚರಣೆ ಇಲ್ಲದೆ ಭಾಷಣದಲ್ಲಿ ಇದ್ದರೆ ಉಪಯೋಗ ಇಲ್ಲ. ಹಾಗಾಗಿ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಮಾರ್ಗದರ್ಶನ ಪಾಲಿಸಿ ಉನ್ನತ ಸಮಾಜ ಕಟ್ಟಲು ಮುಂದೆ ಬರಬೇಕಿದೆ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net