ಬಳ್ಳಾರಿ, ಬೆಳೆಹಾನಿ ಪರಿಹಾರ ಸರ್ಕಾರ ನೀಡಲಿ

Published on

ಬಳ್ಳಾರಿ : ಇತ್ತೀಚೆಗೆ ಸುರಿದ ಮಳೆಯಿಂದ ರಾಜ್ಯದ ಸಾವಿರಾರು ಹೆಕ್ಟೇರ್ ಪ್ರದೇಶ ಹಾಳಾಗಿದ್ದು ಕೂಡಲೇ ಸರ್ಕಾರ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷ ಕುರುಬೂರು ಶಾಂತ ಕುಮಾರ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಟಾವು ಹಂತಕ್ಕೆ ಬಂದಿದ್ದ ಕಬ್ಬು, ಮೆಕ್ಕಜೋಳ, ಬಾಳೆ ಸೇರಿದಂತೆ ಹಲವು ಬೆಳೆ ನಾಶವಾಗಿದೆ. ಆದ್ದರಿಂದ ಜಿಲ್ಲೆಯ ಡಿಸಿಗಳ ಮೂಲಕ ಸಮೀಕ್ಷೆ ನಡೆಸಬೇಕು. ಜತೆಗೆ ವಿಪತ್ತು ಪರಿಹಾರ ನಿಯಿಂದ ಕೂಡಲೇ ರೈತರಿಗೆ ಪರಿಹಾರ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು.ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರು ಮಾರಾಟ ಮಾಡುವ ತರಕಾರಿ, ಹಣ್ಣು, ದಿನಸಿಗಳಿಗೆ ಶೇ.10 ರಷ್ಟು ಕಮಿಷನ್ ದಲ್ಲಾಳಿಗಳು ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರ ಚಟುವಟಿಕೆ ಆಗಿದ್ದು, ಈ ಬಗ್ಗೆ ಕಠಿಣ ಕ್ರಮಕೈಕೊಂಡು ರೈತರ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಿಸಬೇಕು ಎಂದು ಕೃಷಿ ಮಾರಾಟ ಮಂಡಳಿ ರಾಜ್ಯ ಆಯುಕ್ತರಿಗೆ ಒತ್ತಾಯಿಸಿದರು. ರಾಜ್ಯದಲ್ಲಿ ಆನ್‌ಲೈನ್, ಮೊಬೈಲ್ ಬೆಟ್ಟಿಂಗ್ ಗೇಮ್ ನಿಲ್ಲಿಸಬೇಕು. ಹಣದ ಅಮಿಷಕ್ಕೆ ಒಳಗಾಗಿ ಯುವಕರು ವಿಷ್ಯ ನಾಶವಾಗುತ್ತಿದ್ದು, ನೂರಾರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಆನ್‌ಲೈನ್ ಬೆಟ್ಟಿಂಗ್‌ನ್ನು ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ನಿಷೇಧ ಮಾಡಿರುವಂತೆ ಕರ್ನಾಟಕದಲ್ಲಿಯೂ ನಿಷೇಧಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net