ವಿವಿಧ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸಲಿ

Published on

ಬಳ್ಳಾರಿ : ನಗರದ ಜನತೆಗೆ ಶುದ್ಧ ಕುಡಿವ ನೀರು ಪೂರೈಸಬೇಕು ಸೇರಿದಂತೆ ವಿವಿಧ ಸಮಸ್ಯೆಗಳ ದುರಸ್ತಿಗೆ ಒತ್ತಾಯಿಸಿ ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ಸೋಮವಾರ ಪ್ರತಿಭಟಿಸಿದರು.

ವಡ್ಡರ ಬಂಡೆಯ ರಾಜಕಾಲುವೆ ತುರ್ತಾಗಿ ದುರಸ್ತಿಗೊಳಿಸಬೇಕು. ಬೀದಿನಾಯಿ ಹಾಗೂ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು. ಹದಗೆಟ್ಟ ರಸ್ತೆ ದುರಸ್ತಿಗೊಳಿಸಬೇಕು. ಬಳ್ಳಾರಿ ನಗರವು ಧೂಳು ಮಾಯವಾಗಿದ್ದು , ಸೊಳ್ಳೆಗಳ ತಾಣವಾಗಿದೆ. ರಸ್ತೆಗಳಲ್ಲಿ ಬೀದಿ ನಾಯಿಗಳು ಬಿಡಾಡಿ ದನಗಳಿಂದ ಭದ್ರತೆ ಇಲ್ಲದಾಗಿದೆ. ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಅವೈಜ್ಞಾನಿಕ ವೇಗ ತಡೆಗಳು, ನಗರದ್ಯಾಂತ ಸದಾ ತಿರುಗುವ ಬಾರಿ ವಾಹನಗಳು ಹಾಗೂ ಚರಂಡಿ ನೀರು ಮಿಶ್ರಿತ ಕುಡಿವ ನೀರು, ವಾಹನಗಳಿಗೆ ಪಾರ್ಕಿಂಗ್ ಸೇರಿದಂತೆ ಅನೇಕ ಸಮಸ್ಯೆಗಳು ಜನರನ್ನು ಸಂಕಷ್ಟಕೆ ತಳ್ಳಿವೆ. ಆದರೆ, ಇದಕ್ಕೆ ಸಂಬಂಧಿಸಿದ ಪಾಲಿಕೆಯಿಂದ ಸೂಕ್ತ ಕ್ರಮಗಳೇ ಕೈಗೊಳ್ಳುವುದೇ ಇರುವುದು ನಿರ್ಲಕ್ಷೃತನಕ್ಕೆ ಸಾಕ್ಷಿಯಾಗಿವೆ. ಬೇಸಿಗೆಯಲ್ಲಿ ಸಮರ್ಪಕ ಶುದ್ಧ ಕುಡಿವ ನೀರು ಪೂರೈಸಬೇಕು. ಬೀದಿನಾಯಿ, ಬಿಡಾಡಿ ದನಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಬೇಕು. ವಡ್ಡರಬಂಡೆ ಬಳಿ ರಾಜಕಾಲುವೆ ಸೇತುವೆಯನ್ನು ತುರ್ತಾಗಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ನಗರವ್ಯಾಪಿ ಎಲ್ಲ ರಸ್ತೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಬೇಕು. ರಸ್ತೆಗಳ ದುರಸ್ತಿ, ವೈಜ್ಞಾನಿಕ ವೇಗ ತಡೆ ನಿರ್ಮಿಸಬೇಕು. ಎಸ್‌ಎನ್ ಪೇಟೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ಮನಿಯಾರ್ ಲೈನ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ವ್ಯವಸ್ಥಿತಗೊಳಿಸಬೇಕು. ಕಪ್ಪಗಲ್ ರಸ್ತೆ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ, ಸೂಕ್ತ ನಿರ್ವಹಣೆ ಮಾಡಬೇಕು. ರಂಗಮಂದಿರ ಎದುರಗಡೆ ಇರುವ ಉದ್ಯಾನವನ್ನು ದುರಸ್ತಿಗೊಳಿಸಿ ಸೂಕ್ತ ನಿರ್ವಹಣೆ ಮಾಡಬೇಕು ಪ್ರತಿಭಟನಾ ನಿರತರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net